ಉಜಿರೆ: ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಉಜಿರೆಯ ಶ್ರೀ ಧ.ಮಂ. ಮಹಿಳಾ ಐಟಿಐಯಲ್ಲಿ ಸೆ.5 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

 ಕಾರ್ಯಕ್ರಮದಲ್ಲಿ ಎಸ್ ರಾಧಾಕೃಷ್ಣನ್ ಇವರ ಭಾವಚಿತ್ರಕ್ಕೆ ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್ ಹಾಗೂ ಸಿಬ್ಬಂದಿಗಳಾದ ಶ್ರೀಮತಿ ಸಂಧ್ಯಾ, ಶ್ರೀಮತಿ ಸುಮಂಗಲಾ ಹಾಗೂ ಕು. ದಿವ್ಯ ಇವರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಣೆ ಮಾಡಿದರು.

 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರು ಎಸ್ ರಾಧಾಕೃಷ್ಣನ್ ರವರ ಆದರ್ಶ್ ಇಂದಿಗೂ ಶಿಕ್ಷಕರನ್ನು ಗೌರವದಿಂದ ಕಾಣುವ ಹಾಗೆ ಆಗಿದೆ ಅದೇ ರೀತಿ ನಮ್ಮ ಬಾಲ್ಯದ ಶಿಕ್ಷಕ - ಶಿಕ್ಷಕಿಯರನ್ನು ಇಂದು ಖುದ್ದಾಗಿ ಅಥವಾ ದೂರವಾಣಿ ಮೂಲಕ ಮಾತನಾಡಲು ಪ್ರಯತ್ನ ಮಾಡೋಣ ಯಾಕೆಂದರೆ ಇಂದು ನಾವು ಈ ಮಟ್ಟಕ್ಕೆ ಬೆಳೆಯಲು ಅವರ ತ್ಯಾಗ ಹಾಗೂ ಪರಿಶ್ರಮ ಅಮೂಲ್ಯವಾದದ್ದು. ಅದೇ ರೀತಿ ನಮ್ಮ ಮೊದಲ ಗುರು ನಮ್ಮ  ತಾಯಿ-ತಂದೆ. ಇವರಿಬ್ಬರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳಿ ಹಾಗೂ ಗೌರವಿಸಿ. ನಮ್ಮ ತಪ್ಪುಗಳನ್ನು ತಿದ್ದಿ ತೀಡಿ ನಮಗೆ ದೈರ್ಯ ತುಂಬುವ, ಉತ್ತಮ ಆಚಾರ-ವಿಚಾರಗಳನ್ನು ಕಲಿಸಿದ ಗುರುಗಳೊಂದಿಗೆ ಮುಂದೆಯೂ ಇದೇ ರೀತಿಯ ಬಾಂಧವ್ಯ ಬೆಳೆಸಲು ನಾವು ಪ್ರಯತ್ನ ಮಾಡೋಣ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ನಂತರ ವಿದ್ಯಾರ್ಥಿನಿಯರು ಅಧ್ಯಾಪಕರ ಮನರಂಜನೆಗಾಗಿ ಆಟಗಳನ್ನು ಆಡಿಸಿದರು. ಕೊನೆಗೆ ಸಿಹಿ ಹಂಚಿ ಸಂಭ್ರಮಿಸಿದರು. ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಕಾರ್ಯಕ್ರಮ ನಡೆಸಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಧನ್ಯವಾದಗಳನ್ನು ತಿಳಿಸಿದರು.

Leave a Comment

error: Content is protected !!