March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಳ್ತಂಗಡಿ; 35 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸೆ.10 ರಂದು ಮುಂಡಾಜೆ ವೈ ಸಿ ಭವನದಲ್ಲಿ ಜರುಗಿತು.

ಉದ್ಘಾಟನೆಯನ್ನು ಮುಂಡಾಜೆ ದೇವಸ್ಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ರಾಜಗೋಪಾಲ ಭಟ್ ನೆರವೇರಿಸಿ ಆಶೀರ್ವದಿಸಿದರು.ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಬಾಬು ಪೂಜಾರಿ ಕೂಳೂರು ಧಾರ್ಮಿಕ ಚಿಂತನೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರಾದ ನಾಮದೇವ ರಾವ್ ಮತ್ತು ಅಶ್ರಫ್ ಆಲಿಕುಂಞಿ, ಯಂಗ್ ಚಾಲೆಂಜರ್ಸ್ ಸಂಘದ ನಿರ್ದೇಶಕ ಮಂಡಳಿ ಮತ್ತು ಪ್ರಮುಖರಾದ ರಾಘವ ಶೆಟ್ಟಿ ನೆಯ್ಯಾಲು, ಡಾ. ಶಿವಾನಂದ ಸ್ವಾಮಿ ಪರಮುಖ, ವಿಜಯ ಆರ್, ಸುರೇಶ್ ಗೌಡ, ಕಸ್ತೂರಿ ಕೇಶವ್, ಶಶಿಧರ ಠೋಸರ್, ಶೀನ, ಉದಯ ಗೌಡ, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಯುಕ್ತ ಪುಟಾಣಿಗಳಿಗೆ ಭಕ್ತಿ ಗೀತೆ, ವಲಯ ಮಟ್ಟದ ಕೇರಂ ಪಂದ್ಯಾಟ ನಡೆಯಿತು.

Related posts

ನಾವರ: ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

Suddi Udaya

ಕಕ್ಕಿಂಜೆಯ ವೃದ್ಧ ದಂಪತಿಗಳ ಕೊಲೆ ಪ್ರಕರಣ: ಆರೋಪಿ ಗದಗದ ರಾಜುಗೆ ಜೀವಾವಧಿ ಶಿಕ್ಷೆ ಪ್ರಕಟ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

 ಕಳಿಯ: ಅಕ್ರಮ ಮರಳು ಸಾಗಾಟ: ಎರಡು ಪಿಕಪ್ ವಾಹನ ಸಹಿತ ಮರಳು ವಶ

Suddi Udaya

ಕಳಿಯ ನ್ಯಾಯತರ್ಪು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಬಟ್ಲಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್, ಫಾರೂಕ್ ರಿಗೆ ಬಟ್ಲಡ್ಕ ಜಮಾಅತ್ ವತಿಯಿಂದ ಸನ್ಮಾನ

Suddi Udaya
error: Content is protected !!