September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

 ಕಳಿಯ: ಅಕ್ರಮ ಮರಳು ಸಾಗಾಟ: ಎರಡು ಪಿಕಪ್ ವಾಹನ ಸಹಿತ ಮರಳು ವಶ

ಬೆಳ್ತಂಗಡಿ; ಕಳಿಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡ ಪ್ರಕರಣ ಜು. 13ರಂದು ವರದಿಯಾಗಿದೆ.

ಕಳಿಯ ಗ್ರಾಮದ ಗೇರುಕಟ್ಟೆ ಹಾಲಿನ ಸೊಸೈಟಿಯ ಸಮೀಪ ಜು 13ರಂದು ಬೆಳಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ವಾಹನ ಪರಿಶೀಲನೆ ನಡೆಸಿದಾಗ ಇದೆ ದಾರಿಯಾಗಿ ಮರಳು ತುಂಬಿದ ಒಂದು ಲಾರಿ ಹಾಗೂ ಪಿಕಪ್ ವಾಹನ ಬಂದಿದ್ದು ಪೊಲೀಸರನ್ನು ನೋಡಿ ಪಿಕಪ್ ಚಾಲಕ ಪಿಕಪ್ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಚಾಲಕ ಮಹಮ್ಮದ್ ನೌಫಾಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವುದು ಕಂಡು ಬಂದಿದೆ. ಅದೇ ರೀತಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಮರಳಿಗೂ ಯಾವುದೇ ದಾಖಲೆಗಳು ಇಲ್ಲದಿರುವುದು ಕಂಡು ಬಂದಿದೆ ಈ ಹಿನ್ನಲೆಯಲ್ಲಿ ಕೆ.ಎ 18ಬಿ 9818 ನಂಬರ್ ನ ಈಚರ್ ಲಾರಿ ಹಾಗೂ ಕೆ.ಎ 21A 8861ವಂಬರ್ ನ ಪಿಕಪ್ ವಾಹನವನ್ನು ಹಾಗೂ ವಾಹನದಲ್ಲಿದ್ದ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಈ ಎರಡು ವಾಹನಗಳ ಚಾಲಕರ ಹಾಗೂ ವಾಹನಗಳ ಮಾಲಕರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ
ಠಾಣೆ ಪ್ರಕರಣ ದಾಖಲಿಸಲಾಗಿದೆ

Related posts

ಕೊಕ್ಕಡ ಗ್ರಾ.ಪಂ.ವ್ಯಾಪ್ತಿಯಲ್ಲಿ ಬೀದಿ ದೀಪಗಳ ಉದ್ಘಾಟನೆ

Suddi Udaya

ಕಾಶಿಬೆಟ್ಟುನಲ್ಲಿ ರಸ್ತೆ ಮಧ್ಯೆ ಕೈಕೊಟ್ಟ ಟ್ರಕ್: ತಾಸುಗಟ್ಟಲೆ ವಾಹನ ಬ್ಲಾಕ್

Suddi Udaya

ನಡ: ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ನೈನಾಡು ಶ್ರೀ ರಾಮ ಯುವಕ ಸಂಘ ದವರು ನೀಡಿದ ಸ್ಥಳದಲ್ಲಿ ನೂತನ ಅಂಗನವಾಡಿ ಕಟ್ಟಡ ಶುಭಾರಂಭ

Suddi Udaya

ಉದ್ಯಮಿ ಎ.ಸಿ.ಕುರಿಯನ್ ರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಹೊಸಂಗಡಿ ಹಾಗೂ ಬಡಕೋಡಿ ಗ್ರಾಮದ ಬಂಟ ಸಮುದಾಯದ ಬಂಟ ಗ್ರಾಮ ಸಮಿತಿ ರಚನೆ

Suddi Udaya
error: Content is protected !!