38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.54.80 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು  ಸೆ.12ರಂದು ಸಂಘದ ಜ್ಯೇಷ್ಠ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷರಾದ ನ್ಯಾಯವಾದಿ ಭಗೀರಥ ಜಿ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2022-23ನೇ ಸಾಲಿನಲ್ಲಿ ಸಂಘವು ರೂ.114ಕೋಟಿ ವ್ಯವಹಾರ ನಡೆಸಿ, ರೂ.54.80 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.


ಕಳೆದ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಅತೀ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ಆನಂದ ಕೋಟ್ಯಾನ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ರೈತರಿಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾ ದ ಚಂದ್ರಶೇಖರ ಮತ್ತು ತಂಡದವರು ಮಾಹಿತಿ ನೀಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್ ವಾರ್ಷಿಕ ವರದಿ ಮಂಡಿಸಿದರು.  ಸಂಘದ ಉಪಾಧ್ಯಕ್ಷೆ ಸುಜಿತಾ.ವಿ.ಬಂಗೇರ ನಿರ್ದೇಶಕರುಗಳಾದ ,  ನಾರಾಯಣ ರಾವ್ ಮುಗುಳಿ ವಡಿವೇಲು, ಶಾರದಾ, ಗೋಪಿನಾಥ ನಾಯಕ್, ಭುಜಂಗ ಕೆ ಶೆಟ್ಟಿ, ಚಂದ್ರರಾಜ್, ಪುರಂದರ ಶೆಟ್ಟಿ, ಹರೀಶ್ಚಂದ್ರ,ಡಿ.ಸಿ.ಸಿ. ಪ್ರತಿನಿಧಿ ಸಿರಾಜುದ್ದೀನ್ ಸಂಘದ ಸದಸ್ಯರು,ನ ಸಿಬ್ಬಂದಿಗಳು ಸಭೆಯಲ್ಲಿ  ಉಪಸ್ಥಿತರಿದ್ದರು. ನಿರ್ದೇಶಕರಾದ ಸಚಿನ್ ಕುಮಾರ್ ನೂಜೋಡಿ ಧನ್ಯವಾದವಿತ್ತರು.

Related posts

ನಾರಾವಿ: ಮಾಂಡೋವಿ ಮೋಟಾರ್‍ಸ್ ನಾರಾವಿ ಶಾಖೆಯ ಉದ್ಘಾಟನೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಸುಲ್ಯೋಡಿ ಶಾಲೆಯಲ್ಲಿ ಶ್ರಮದಾನ

Suddi Udaya

ಜ.7: ತಣ್ಣೀರುಪಂತ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮುಂಡಾಜೆ: ಬಂಟರ ಸಂಘದ ಸಹಯೋಗದಲ್ಲಿ ಮನೆ ನಿರ್ಮಾಣಕ್ಕೆ ಸಹಕಾರ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!