April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಶಿಕ್ಷಕರ ದಿನಾಚರಣೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಧನಾತ್ಮಕ ಪ್ರಭಾವವನ್ನು ಬೀರುವರು. ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಸದಾ ಜ್ಞಾನಾಭಿವೃದ್ಧಿಯನ್ನು ಮಾಡುತ್ತಲೇ ಇರುತ್ತಾರೆ. ವಿದ್ಯಾರ್ಥಿಗಳ ಸರಿ ತಪ್ಪುಗಳನ್ನು ಬೇರ್ಪಡಿಸಿ ಸನ್ಮಾರ್ಗದ ದಾರಿಗೆ ಕೊಂಡೊಯ್ಯುವವರು ಶಿಕ್ಷಕರು. ಗುರುಗಳ ಮಾತನ್ನು ಪಾಲಿಸಿದರೆ ಸಾಧನೆಯೆಡೆಗೆ ಹೋಗಲು ಸಾಧ್ಯ ಎಂದು ಅವರು ಹೇಳಿದರು. ಕಾಲೇಜಿನಪ್ರಾಂಶುಪಾಲರಾದ ವಂ| ಜೆರೊಮ್ ಡಿಸೋಜ ಶಿಕ್ಷಕರ ಮಹತ್ವದ ಕುರಿತು ಮಾತನಾಡಿದರು.


ಉಪನ್ಯಾಸಕಿ ಲೆಜ್ವಿನ್ ಜೆಶಲ್ ಶಿಕ್ಷಕರ-ವಿದ್ಯಾರ್ಥಿಗಳ ಬಾಂಧವ್ಯದ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಆಂಕಿತ ಗುರು ವಂದನೆಯನ್ನು ಸಲ್ಲಿಸಿದರು. ಮಹಮ್ಮದ್ ಇಸಾಕ್ ಸ್ವಾಗತಿಸಿ,ಸೌರವ್ ವಂದಿಸಿದರು , ಜೊಹನ್, ಮೌಶಿನಾ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಮೊತ್ತ ವಿತರಣೆ

Suddi Udaya

ವೇಣೂರಿನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆದ್ರಬೆಟ್ಟು ರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ

Suddi Udaya

ಶಾಸಕ ಪೂಂಜರ ಕಚೇರಿ ಶ್ರಮಿಕಕ್ಕೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿ

Suddi Udaya

ನಯನಾಡು ಸರಕಾರಿ ಪ್ರೌಢಶಾಲೆಗೆ ಯಸ್ಕಾವ ಕಂಪೆನಿಯ ವತಿಯಿಂದ ಉಪಕರಣಗಳ ಹಸ್ತಾಂತರ

Suddi Udaya

ಅಳದಂಗಡಿ: ಇತ್ತೀಚೆಗೆ ಭಾರಿ ಗಾಳಿ , ಮಳೆಗೆ ಕುಸಿತಗೊಂಡ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ: ತಾತ್ಕಾಲಿಕ ಮನೆ ದುರಸ್ತಿಗೆ ನೆರವು

Suddi Udaya
error: Content is protected !!