ಮೇಲಂತಬೆಟ್ಟು: ಕೃಷಿಕ ಯುವಕ ಮಂಡಲ (ರಿ.) ದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಸೆ.10ರಂದು ಮೇಲಂತಬೆಟ್ಟು ಶಾಲಾ ಮೈದಾನದಲ್ಲಿ ನಡೆಯಿತು.
ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೃಷಿಕ ಯುವಕ ಮಂಡಲದ ಅಧ್ಯಕ್ಷ ಜಗದೀಶ್ ಬರಮೇಲು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೃಷಿಕ ಯುವಕ ಮಂಡಲದ ಗೌರವಾಧ್ಯಕ್ಷ ಧರ್ಣಪ್ಪ ಬಂಗೇರ, ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸವಿತಾ, ಸ್ಪೂರ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಜೆಸಿಂತಾ ಮೋನಿಸ್, ಗಿರೀಶ್ ಕುಮಾರ್ ಭಾಗವಹಿಸಿದ್ದರು.
ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಧರ್ಮದರ್ಶಿಗಳಾದ ಯೋಗೀಶ್ ಕುಮಾರ್, ಶೈಲೇಶ್ ಕುಮಾರ್ ಕುರ್ತೋಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುರುಷರಿಗೆ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಮಲ್ಲಕಂಬ, ಗುಂಡೆಸೆತ, ಮಡಿಕೆ ಒಡೆಯುವುದು, ಮಹಿಳೆಯರಿಗೆ ತ್ರೋಬಾಲ್, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಗುಂಡೆಸೆತ, ಮಡಿಕೆ ಒಡೆಯುವುದು, ಮಕ್ಕಳಿಗೆ ಲಿಂಬೆ ಚಮಚ, 100 ಮೀ ಓಟ, ಗೋಣಿಚೀಲ ಓಟ, ಲಕ್ಕಿಗೇಮ್, ಕಬಡ್ಡಿ ಮೊದಲಾದ ಸ್ಪರ್ಧೆಗಳು ನಡೆಯಿತು. ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಮತ್ತು ಭಕ್ತಿಗೀತೆ ಸ್ಪರ್ಧೆ ನಡೆಸಲಾಯಿತು.