ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.13 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ರವರು ಹವಾಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ಮಾಹಿತಿ ನೀಡಿದರು.
ಸಂಘದ ವತಿಯಿಂದ ವಿಶೇಷ ಸಾಧನೆ ಮಾಡಿದ ಉಮೇಶ್ ಗೌಡ ಬಡಕೈಲು, ಚಿನ್ನಮ್ಮ ಗುಂಪಕಲ್ಲು, ಹೊನ್ನಪ್ಪ ಗೌಡ ಪೂವಾಜೆ, ವೆಂಕಪ್ಪ ಗೌಡ ಕೇಚೋಡಿ, ಆನಂದ ಗೌಡ, ಕುಸುಮಾವತಿ, ಭವ್ಯ ಆಲಂಬಿಲ, ಪ್ರಸನ್ನ ಕುಮಾರ್ ಕಂರ್ಬಿಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಸದಸ್ಯರ ಮಕ್ಕಳಾದ ಕಳೆದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ನಿರೀಕ್ಷ, ಭರತೇಶ್, ಅನನ್ಯ, ಹರ್ಷಿತ, ಸುಜಯ, ಸಂದೀಪ್, ನಿಧಿ ಎ, ಅನನ್ಯ, ಪೂಜಾ, ವಿಜೇತ್, ಭವ್ಯಶ್ರೀ, ರೂಪೇಶ್ ಆರ್, ದೀಕ್ಷಿತಾ, ಹಿಶಾ ಇವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ ವಾರ್ಷಿಕ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಈಶ್ವರ ಭಟ್ ಕೆ., ನಿರ್ದೇಶಕರುಗಳಾದ ಜಾರಪ್ಪ ಗೌಡ ಎಸ್, ಮಹಾಬಲ ಶೆಟ್ಟಿ, ಪದ್ಮನಾಭ ಗೌಡ, ವಿಶ್ವನಾಥ ಕೆ., ವಿಠಲ ಭಂಡಾರಿ, ಶ್ರೀಮತಿ ಪ್ರೇಮಾವತಿ , ವೇದಾವತಿ, ವಿಶ್ವನಾಥ ಎಂ.ಕೆ., ಕೇಶವ ಕೆ. , ಮೋನಪ್ಪ ಬಿ ಉಪಸ್ಥಿತರಿದ್ದರು.