ಬೆಳ್ತಂಗಡಿ: ಮಂಗಳೂರು ಕೃಷಿಕರ ಸಹಕಾರಿ ಸಂಘ ನಿ ಮಂಗಳೂರು (ಮಾಸ್ ಲಿಮಿಟೆಡ್) ಇವರಿಂದ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇವರ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆಯು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದರ ಗುರುವಾಯನಕೆರೆ ಶಾಖೆಯ ವಠಾರದಲ್ಲಿ ಸೆ.15 ರಂದು ನಡೆಯಿತು.
ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆಯನ್ನು ಮಂಗಳೂರು ಮಾಸ್ ಲಿ. ಸ್ಥಾಪಕ ಅಧ್ಯಕ್ಷರಾದ ಟಿ.ಜಿ ರಾಜಾರಾಮ್ ಭಟ್ ನೆರವೇರಿಸಿ ಶುಭಕೋರಿದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಜಿ ಭಿಡೆ ವಹಿಸಿದ್ದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಕೆ.ವಸಂತ ಸಾಲಿಯಾನ್ ಕಾಪಿನಡ್ಕ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಮಾಸ್ ಉಪಾಧ್ಯಕ್ಷರಾದ ಸೀತರಾಮ ರೈ ಸವಣೂರು, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಎಂ, ಕಳಿಯ ಸಿ.ಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜೆ, ಮಾಸ್ ಲಿ ಮಂಗಳೂರು ನಿರ್ದೇಶಕರಾದ ಇ.ಸುಂದರ ಗೌಡ, ಶಿವಾಜಿ ಎಸ್ ಸುವರ್ಣ, ಪುಷ್ಪರಾಜ ಅಡ್ಯಂತಾಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಸ್ ಲಿ ಮಂಗಳೂರು ಇದರ ಅಧ್ಯಕ್ಷರಾದ ಭಾಸ್ಕರ ಎಸ್ ಕೋಟ್ಯಾನ್,ನಿರ್ದೇಶಕರಾದ ಎಂ.ಬಿ ನಿತ್ಯಾನಂದ ಮುಂಡೋಡಿ, ಶ್ರೀರಾಮ ಪಿ.ಸಿ,ಮೋನಪ್ಪ ಶೆಟ್ಟಿ ಎಕ್ಕಾರು, ಬಿ.ಪ್ರದೀಪ ಯಡಿಯಾಳ,ಅಶೋಕ್ ಕುಮಾರ್ ಬಳ್ಳಾಳ್,ರಾಜೀವಿ ಆರ್ ರೈ, ಸುಧಾ ಎಸ್ ರೈ,ಬಿ.ನಾರಾಯಣ ನಾಯ್ಕ, ಟಿ.ರಾಘವ ಶೆಟ್ಟಿ, ಪಿ ರಾಜಾರಾಮ ಶೆಟ್ಟಿ, ಸತೀಶ್ ಕೆ,ನಾಗಪ್ಪ ಪೂಜಾರಿ, ಸಿಇಓ ಟಿ.ಮಹಾಬಲೇಶ್ವರ ಭಟ್,ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ನಿರ್ದೇಶಕರಾದ ಎನ್ ಪದ್ಮನಾಭ,ಜಯಶ್ರೀ ಡಿ.ಎಂ,ಕೆ.ರಾಮ ನಾಯ್ಕ,ಕೆ.ಜೆ ಅಗಸ್ಟಿನ್, ಸೋಮನಾಥ ಬಂಗೇರ ವರ್ಪಾಳೆ,ಗ್ರೇಶಿಯನ್ ವೇಗಸ್,ಬಾಲಕೃಷ್ಣ ಗೌಡ ಕೆ,ವಿ.ವಿ ಅಬ್ರಾಹಂ, ಹೆಚ್ ಪದ್ಮ ಗೌಡ, ಶಶಿಧರ ಡೋಂಗ್ರೆ, ಬೈರಪ್ಪ,ಆರ್ ಸುಭಾಷಿಣಿ, ರಬ್ಬರ್ ಪ್ರೋಡಕ್ಷನ್ ಕಮಿಷಬರ್ ಪದನಿಮಿತ್ತ ಶೀಜಾ,ವಿಶೇಷ ಆಹ್ವಾನಿತರು ಬಿಎಸ್ ಅಬ್ರಾಹಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು.