25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಯಂ. ಐ.ಟಿ.ಐ.ಯಲ್ಲಿ ಇಂಜಿನಿಯರ್ಸ್ ಡೇ ಹಾಗೂ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಉಜಿರೆ: ತಂತ್ರಜ್ಞಾನವು ಇಂದಿನ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇಂದಿನ ಈ ಬೆಳವಣಿಗೆಗೆ ಸರ್ ಎಂ. ವಿಶ್ವೇಶ್ವರಯ್ಯನವರಂತಹ ಮಹಾನ್ ತಂತ್ರಜ್ಞರು ಹಾಕಿಕೊಟ್ಟ ಭದ್ರವಾದ ಬುನಾದಿ ಮತ್ತು ದೂರದೃಷ್ಟಿಯ ಯೋಜನೆಗಳು ಸಹಕಾರಿಯಾಗಿವೆ. ಮಾನವ ಸಮಾಜಕ್ಕೆ ನಾನಾ ಕೊಡುಗೆಗಳನ್ನು ನೀಡಿದ ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ ಸರ್ ಎಂ. ವಿಶ್ವೇಶ್ವರಯ್ಯನವರು ಎಂದು ಉಜಿರೆಯ ಎಸ್.ಡಿ.ಯಂ. ಇಂಜಿನಿಯರಿಂಗ್ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಅವರು ನುಡಿದರು.

ಇದೇ ಸಂದರ್ಭದಲ್ಲಿ ಭಾರತದ ಸಂವಿಧಾನ ಸಹಿಷ್ಣುತೆ, ಸಹಬಾಳ್ವೆಗೆ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶವನ್ನು ನೀಡಿದೆ ಎಂದು ಎಸ್.ಡಿ.ಯಂ. ಪಿ.ಯು ಕಾಲೇಜಿನ ಉಪನ್ಯಾಸಕಿ ಶ್ರೀ ದಿವ್ಯಾ ಕುಮಾರಿ ನುಡಿದರು.

ಅವರು ಇಂದು ವೇಣೂರಿನ ಎಸ್.ಡಿ.ಎಂ. ಕೈಗಾರಿಕಾ ತರಬೇತಿ ಕೇಂದ್ರವು ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಹಾಗೂ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ವಹಿಸಿದ್ದು, ಹಿರಿಯ ತರಬೇತಿ ಅಧಿಕಾರಿ ರತ್ನಾಕರ್ ಅವರು ಸ್ವಾಗತಿಸಿದರು.

Related posts

ಪದ್ಮುಂಜ ಪ್ರಾ.ಕೃ.ಪ.ಸ. ಸಂಘದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಪ್ರಯುಕ್ತ “ಏಕ್ ಪೇಡ್ ಮಾ ಕೇ ನಾಮ್ ” ಕಾರ್ಯಕ್ರಮ

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಶಿಕ್ಷಣದಲ್ಲಿ ತಂತ್ರಜ್ಞಾನ” ಕಾರ್ಯಾಗಾರ

Suddi Udaya

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ಮಹಾ ಕುಂಭಮೇಳದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಹಾಗೂ ಗಣೇಶ್ ಕುಂದರ್ ಬಳಗದವರಿಂದ ಶಾಹಿ ಸ್ನಾನ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ 2 ದಿನದ ತರಬೇತಿ ಕಾರ್ಯಾಗಾರ

Suddi Udaya

ಪುಂಜಾಲಕಟ್ಟೆ ಬಸವನಗುಡಿಯಲ್ಲಿ ಪಿವೈ ಟ್ರೇಡಿಂಗ್ ಟೈಲ್ಸ್,ಗ್ರಾನೈಟ್ ಹಾಗೂ ಸ್ಯಾನಿಟರಿ ಮಳಿಗೆ ಶುಭಾರಂಭ

Suddi Udaya
error: Content is protected !!