37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ಯುವ ನಾಯಕ ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ,ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ,ನಾಲ್ಕೂರು,ತೆಂಕಕಾರಂದೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಯುವ ಮುಂದಾಳು ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆಯಾಗಿದ್ದಾರೆ.

ಒಂದೇ ಜಾತಿ ,ಒಂದೇ ಮತ, ಒಬ್ಬನೇ ದೇವರು ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಪರಿಪಾಲಿಸಿಕೊಂಡು ಬರುತ್ತಿರುವ ಸುಮಾರು 44 ವರ್ಷಗಳ ಪರಂಪರೆಯಿರುವ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ ಮತ್ತು ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್ ಹಾಗೂ ಮಾಜಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ,ಸಮಿತಿ ಸದಸ್ಯರ ಸಹಕಾರದೊಂದಿಗೆ ಮುನ್ನಡೆಯುತ್ತಿದೆ.

ಸಂಘದ ಉಪಾಧ್ಯಕ್ಷರಾಗಿ ರವೀಂದ್ರ ಬಿ ಅಮೀನ್ ಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ ಬಳ್ಳಿದಡ್ಡ,ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್ ಹೆಚ್‌.ಎಸ್, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಡಿ ಕೋಟ್ಯಾನ್ ದರ್ಖಾಸು ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಸಂತೋಷ್ ಕುಮಾರ್ ಕಾಪಿನಡ್ಕ, ದಿನೇಶ್ ಕೋಟ್ಯಾನ್ ಕುದ್ರೋಟ್ಟು,ದಿನೇಶ್ ಪೂಜಾರಿ ಅಂತರ, ಯೋಗೀಶ್ ಪೂಜಾರಿ ಯೈಕುರಿ, ಯತೀಶ್ ವೈ.ಎಲ್ ಬಳಂಜ,ಸದಾನಂದ ಪೂಜಾರಿ ಬೊಂಟ್ರೋಟ್ಟು, ಪ್ರವೀಣ್ ಪೂಜಾರಿ ಲಾಂತ್ಯಾರು, ಜಗದೀಶ್ ಪೂಜಾರಿ ತಾರಿಪಡ್ಪು, ರಂಜಿತ್ ಪೂಜಾರಿ ಮಜಲಡ್ಡ, ರಕ್ಷಿತ್ ಪೂಜಾರಿ ಬಗ್ಯೋಟ್ಟು, ಪವನ್ ಪೂಜಾರಿ ಕಟ್ಟೆ ಆಯ್ಕೆಯಾಗಿದ್ದಾರೆ.

Related posts

ಸುಲ್ಕೇರಿ ಶ್ರೀ ರಾಮ ಪ್ರೌಢ ಶಾಲೆಯ ಪ್ರಾರಂಭೋತ್ಸವ

Suddi Udaya

ಕೇಳ ಪಂಚಲಿಂಗೇಶ್ವರ ದೇವಸ್ಥಾನ ಶಿಲಾನ್ಯಾಸ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಡಂಗಡಿ: ಮುನಿಶ್ರೀ 108 ದಿವ್ಯಸಾಗರ ಮಹಾರಾಜರ ಭವ್ಯ ಚಾತುರ್ಮಾಸ

Suddi Udaya

ತಾಲೂಕು ಮಟ್ಟದ ಸ್ಪರ್ಧೆ: ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ

Suddi Udaya

ಚಾರ್ಮಾಡಿ ನಿವಾಸಿ ಸತ್ಯನಾರಾಯಣ ನಾಯಕ್ ನಿಧನ

Suddi Udaya

ಶಿರ್ಲಾಲು ವಿ.ಹಿಂ.ಪ. ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya
error: Content is protected !!