23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತ್ಯಾಜ್ಯ ಮುಕ್ತ ಭಾರತ ಸ್ವಚ್ಛತೆಯೇ ಸೇವೆ. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಧರ್ಮಸ್ಥಳದ ನೇತ್ರಾವತಿ ನದಿ ಸ್ಥಾನಘಟ್ಟದಲ್ಲಿ ಚಾಲನೆ

ಬೆಳ್ತಂಗಡಿ; ಸ್ವಚ್ಚತೆಯೆಂಬುದು ಒಂದು ದಿನದ ಕಾರ್ಯವಲ್ಲ ನಿರಂತರವಾಗಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತಿನ ಉಪ ಕಾರ್ಯದರ್ಶಿ ಹಾಗೂ ಸ್ವಚ್ಚ ಭಾರತ್ ಯೋಜನೆಯ ನೋಡಲ್ ಅಧಿಕಾರಿ ಡಾ. ರಘು ಹೇಳಿದರು.


ಅವರು ಧರ್ಮಸ್ಥಳದ ನೇತ್ರಾವತಿ ನದಿ ಸ್ಥಾನಘಟ್ಟದಲ್ಲಿ ತ್ಯಾಜ್ಯ ಮುಕ್ತ ಭಾರತ ” ಸ್ವಚ್ಚತೆಯೇ ಸೇವೆ ” ಕಾರ್ಯಕ್ರಮದ ಅಡಿಯಲ್ಲಿ ಸೆ. 15 ರಿಂದ ಅಕ್ಟೋಬರ್ 2 ವರೆಗೆ ನಡೆಯಲಿರುವ ದ.ಕ ಜಿಲ್ಲಾಮಟ್ಟದ ಸ್ವಚ್ಚತಾ ಆಂದೋಲನ ಕಾರ್ಯಕ್ರಮಕ್ಕೆ ಕಾರ್ಯಕ್ರಮವನ್ನು ಜಿ.ಪಂ. ಉಪ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ನೋಡಲ್ ಅಧಿಕಾರಿಯವರು ಸ್ನಾನ ಘಟ್ಟದ ಕಸವನ್ನು ಗುಡಿಸುವ ಮೂಲಕ ಚಾಲನೆ ನೀಡಿದರು.


ಎರಡು ವಾರಗಳ ಕಾಲ ಈ ಆಂದೋಲನ ನಡೆಯಲಿದ್ದು ಈ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಅದರೊಂದಿಗೆ ಜಲಮೂಲಗಳ ಸ್ವಚ್ಚತೆ, ಪರಿಸರ ಸ್ವಚ್ಚತೆ ಸಾರ್ವಜನಿಕ ಸ್ಥಳಗಳ ಸ್ವಚ್ಚತೆ ಸೇರಿದಂತೆ ವಿವಿಧ ರೀತಿಯ ಸ್ವಚ್ಚತಾ ಕಾರ್ಯಕ್ರಮಗಳನ್ನು ಜಿಲ್ಲೆಯಾಧ್ಯಂತ ಹಮ್ಮಿಕೊಳ್ಳಲಾಗುವುದು ಎಂದರು.


ಮುಖ್ಯ ಅತಿಧಿಗಳಾಗಿ ಆಗಮಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವೆ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಿದ್ದರೆ. ಸ್ವಚ್ವತೆಯ ಬಗೆಗಿನ ಅವರ ಕಾಳಜಿಯಿಂದಾಗಿ ಕ್ಷೇತ್ರ ಸ್ವಚ್ಚತೆಗೆ ಹೆಸರು ಪಡೆಯುವಂತಾಗಿದೆ. ಒಂದು ಗ್ರಾಮ ಸ್ವಚ್ಚವಾಗಿರಬೇಕಾದರೆ ಎಲ್ಲರೂ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.
ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ವಿಮಲ, ದೇವಳದ ಮ್ಯಾನೇಜರ್ ಪಾರ್ಶ್ವನಾಥ ಜೈನ್, ಸ್ವಚ್ಚ ಭಾರತ್ ಮೊಷನ್ ಜಿಲ್ಲಾ ಸಂಯೋಜಕ ಡೊಂಬಯ್ಯ, ಜಲಜೀವನ್ ಮಿಷನ್ ವ್ಯವಸ್ಥಾಪಕ ವಿಘ್ನೇಶ್, ಗ್ರಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸ್ವಚ್ಚತಾ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಉಜಿರೆ ಎಸ್.ಡಿ.ಎಂ ಕಾಲೇಜಿನ ಎನ್. ಎಸ್.ಎಸ್. ಘಟಕದ 150ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಗಳಾದರು.ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳ ಹಾಗೂ ಪಂಚಾಯತ್ ಗಳಲ್ಲಿ ಏಕ ಕಾಲದಲ್ಲಿ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು
ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಉಮೇಶ್ ಸ್ವಾಗತಿಸಿದರು. ಡಾ.ದೇವಿಪ್ರಸಾದ್ ಬೊಳ್ಮ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ವಂದಿಸಿದರು.

Related posts

“ನಾರಿ ಇನ್ ಪಿಂಕ್ ಸಾರಿ” ಕ್ಯಾನ್ಸರ್ ಜಾಗೃತಿ ಜಾಥಾ ಮತ್ತು ಕ್ಯಾನ್ಸರ್ ಮಾಹಿತಿ ಕಾರ್ಯಕ್ರಮಕ್ಕೆ ಜೆಸಿಐ ಭಾರತದಿಂದ ಬೆಳ್ತಂಗಡಿ ಜೆಸಿಐ ಗೆ ವಿಶೇಷ ಮನ್ನಣೆ

Suddi Udaya

ಮದ್ದಡ್ಕ ಸಮೀಪದ ನೇರಳಕಟ್ಟೆಯಲ್ಲಿ ಬೈಕ್ ಮತ್ತು ಅಕ್ಟೀವಾ ಡಿಕ್ಕಿ: ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಓಡಿಲ್ನಾಳ ಮೈರಲ್ಕೆ ಶ್ರೀ ರಾಮನಗರ ಸಾರ್ವಜನಿಕ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಮುಡಿಪು ಜವಾಹರ್ ನವೋದಯ ಶಾಲೆಗೆ ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿ ಕು| ಯತಿಕ್ ಕೆ. ಎಸ್ ಆಯ್ಕೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ಧೃಡ ಕಲಶ ಹಾಗೂ ಅಭಿನಂದನಾ ಸಮಾರಂಭ

Suddi Udaya
error: Content is protected !!