31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.340 ಕೋಟಿ ವ್ಯವಹಾರ, ರೂ. 71 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ 21% ಡಿವಿಡೆಂಡ್ ಸುಮಾರು 37 ವರ್ಷ ಸೇವೆ ಸಲ್ಲಿಸಿದ ಮಹೇಂದ್ರವರ್ಮರಿಗೆ ಬೀಳ್ಕೊಡುಗೆ

ಪೆರಾಡಿ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪೆರಾಡಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ ಇವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಸೆ.17 ರಂದು ನಡೆಯಿತು.

ಸಂಘ 3018 ಸದಸ್ಯರನ್ನು ಹೊಂದಿದ್ದು ಒಟ್ಟು ರೂ. 85,57,06,037 ದುಡಿಯುವ ಬಂಡವಾಳ ಹೊಂದಿರುತ್ತದೆ. ಈ ಸಾಲಿನಲ್ಲಿ ಒಟ್ಟು ರೂ. 48ಕೋಟಿ ಠೇವಣಿ ಸಂಗ್ರಹಗೊಂಡು ರೂ. 340 ಕೋಡಿಯಷ್ಡು ವಾರ್ಷಿಕ ವ್ಯವಹಾರ ನಡೆಸಿ ರೂ 71 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 21%ಡಿವಿಡೆಂಡ್ ಘೋಷಣೆ ಮಾಡಿದರು.ಸಂಘದ ಪೆರಿಂಜೆ ಶಾಖೆಯಲ್ಲಿ ವ್ಯವಸ್ಥಾಪರಾಗಿದ್ದ ಸುಮಾರು 37ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಹೇಂದ್ರವರ್ಮಾ ಪಿ.ಇವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಇವರನ್ನು ಪಡ್ಯಾರಬೆಟ್ಟ ವಿಕಾಸ್ ಜೈನ್ ರವರು ಸನ್ಮಾನಿಸಿ ಗೌರವಿಸಿದರು. ನಿವೃತ್ತ ಮುಖ್ಯಕಾರ್ಯನಿವಣಾಧಿಕಾರಿ ಎಸ್ ಆರ್ ಪಟವರ್ಧನ್, ಮಾಜಿ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ, ಸಹಕಾರಿ ಅಧಿಕಾರಿ ಪ್ರತಿಮಾ, ಎಂ.ಕೆ.ಆರಿಗ, ಮಹೇಂದ್ರವರ್ಮ ಇವರ ಪತ್ನಿ ಶ್ರೀಮತಿ ಅನೂಪ, ಸಂಘದ ಉಪಾಧ್ಯಕ್ಷೆ ಶ್ರೀಮತಿ ದೇವಕಿ ಶೆಟ್ಟಿ

ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಕ್ ಲತೀಫ್ , ನಿರ್ದೇಶಕರಾದ ಎನ್. ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೊ, ಪುತ್ತು ನಾಯ್ಕ, ಹರಿಪ್ರಸಾದ್, ಧರ್ಣಪ್ಪ ಪೂಜಾರಿ, ಶ್ರೀಮತಿ ಸುಜಾತ, ಶ್ರೀಪತಿ ಉಪಾಧ್ಯಾಯ ,ರಾಜೇಶ್ ಶೆಟ್ಟಿ, ಕೃಷ್ಣಪ್ಪ , ಡಿ. ಸಿ. ಸಿ. ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಶ್ರೀಮತಿ ಹೇಮಾ ಶ್ರೀಮತಿ ರೋಹಿಣಿ ,ವೀರೇಂದ್ರ ಕುಮಾರ್ , ಶ್ರೀಮತಿ ಮಮತಾ, ಲಕ್ಷ್ಮಣ, ಶ್ರೀಮತಿ ಕವಿತಾ ,ಶ್ರೀಮತಿ ರಮ್ಯಾ , ಶ್ರೀಮತಿ ನಳಿನಿ, ಸುಜಿತ್ ಕುಮಾರ್, ಮನೋಜ್ ಕುಮಾರ್, ಶ್ರೀಮತಿ ಹರ್ಷಲಾ ವಿ. ಜೈನ್ ಸಹಕರಿಸಿದರು. ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ್ ಬುಣ್ಣನ್, ಉಪಾಧ್ಯಕ್ಷ ಶುಭರಾಜ್ ಹೆಗ್ಡೆ , ನಿವೃತ್ತ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಕಾಶಿಪಟ್ಣ ಮಾಜಿ ಅಧ್ಯಕ್ಷೆ ಶಿಲ್ಪಾ, ಸಂಘದ ಮಾಜಿ, ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರುಗಳು,ಮರೋಡಿ, ಕಾಶಿಪಟ್ಣ, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರು, ಉಪಸ್ಥಿತರಿದ್ದರು. 5 ಗ್ರಾಮಗಳ ವ್ಯಾಪ್ತಿಯ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಂಘದ ಸದಸ್ಯರ ಮೃತಪಟ್ಟ ಕುಟುಂಬಕ್ಕೆ ಆರ್ಥಿಕ ನೆರವು, 135ಬವಿಕಲ ಚೇತನರಿಗೆ ಆರ್ಥಿಕ ನೆರವು ವಿವರಿಸಲಾಯಿತು.ಮುಖ್ಯ ಕಾರ್ಯನಿರ್ವಣಾಧಿಕಾರಿ ಯು. ಶೇಕ್ ಲತೀಫ್ ವರದಿ ಮಂಡಿಸಿದರು. ನಿರ್ದೇಶಕ ಶ್ರೀಪತಿ ಉಪಾದ್ಯಾಯ ವಂದಿಸಿದರು.

Related posts

ಬಳಂಜ: ಬೊಳ್ಳಾಜೆ- ಡೆಂಜೋಲಿ ರಸ್ತೆ ಮದ್ಯೆ ವಿದ್ಯುತ್ ತಂತಿ ಮೇಲೆ ಬಿದ್ದ ಮರ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು-ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ತಾಲೂಕು ಜನಜಾಗೃತಿ ವೇದಿಕೆಯ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮೇ.13: ಸುರತ್ಕಲ್ ಎನ್‌ಐಟಿಕೆಯಲ್ಲಿ ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ: ಸ್ಟ್ರಾಂಗ್ ರೂಮ್‌ಗೆ ಕೇಂದ್ರೀಯ ಅರೆಸೇನಾ ಪಡೆಯಿಂದ ಬಿಗು ಭದ್ರತೆ

Suddi Udaya

ಚಾರ್ಮಾಡಿ: ಇರ್ಫಾನ್ ಅಸೌಖ್ಯದಿಂದ ನಿಧನ

Suddi Udaya

ಕೊಕ್ಕಡ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ

Suddi Udaya
error: Content is protected !!