ನಾರಾವಿ: ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಸೆ. 17 ರಂದು ಧರ್ಮಶ್ರೀ ಸಭಾಭವನ ನಾರಾವಿಯಲ್ಲಿ ನಡೆಯಿತು.ವರದಿ ಸಾಲಿನಲ್ಲಿ ಸಂಘವು ರೂ 198.74 ಕೋಟಿ ವ್ಯವಹಾರ ಮಾಡಿದ್ದು,66.79 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 12 ಶೇ ಡಿವಿಡೆಂಟ್ ಘೋಷಿಸಲಾಯಿತು..
ಸಂಘವು ವ್ಯವಹಾರದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ ರಂದು ಸಂಘದ ಅಧ್ಯಕ್ಷ ಎನ್. ಸುಧಾಕರ ಭಂಡಾರಿ ಹೇಳಿದರು.ವೇದಿಕೆಯಲ್ಲಿ ನಾರಾವಿ ಗ್ರಾ.ಪಂ ಅಧ್ಯಕ್ಷ ರಾಜವರ್ಮ ಜೈನ್, ಸಂಘದ ಉಪಾಧ್ಯಕ್ಷ ಸದಾನಂದ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಶಿಕಾಂತ್ ಜೈನ್,ನಿರ್ದೇಶಕರರಾದ ಎನ್ ಜೀವಂಧರ್ ಕುಮಾರ್, ವಿಠಲ ಪೂಜಾರಿ,ರಾಜೇಂದ್ರ ಕುಮಾರ್,ಜಗದೀಶ ಹೆಗ್ಡೆ, ಲಕ್ಷ್ಮಣ ಪೂಜಾರಿ, ಲಿಂಗಪ್ಪ ಮಲೆಕುಡಿಯ,ಹರೀಶ್ ಹೆಗ್ಡೆ,ಪೆರ್ನ,ಶ್ರೀಮತಿ ಯಶೋಧ,ಶ್ರೀಮತಿ ಸುಜಲತಾ ಉಪಸ್ಥಿತರಿದ್ದರು.
ತೋಟಗಾರಿಕ ಇಲಾಖೆಯ ಮಹಾವೀರ್ ಅವರು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಸಭೆಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಅಂಚೆ ವಿತರಕರನ್ನು ಗೌರವಿಸಿದರು.ಸೊಸೈಟಿ ಸಿಬ್ಬಂದಿಗಳಾದ ವನಿತಾ,ಶೇಖರ ಕೆ,ಮಲ್ಲಿಕಾ,ಶ್ರೇಯಾಂಸ ಕುಮಾರ್,ಅಶೋಕ್ ಸಹಕರಿಸಿದರು.