April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ಪಟ್ರಮೆ : ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಸೆ.16 ರಂದು ಅನಾರು ದುರ್ಗಾಪರಮೇಶ್ವರಿ ದೇವಳದ ಅರ್ಚಕರಾದ ಗುರುಪ್ರಸಾದ್ ನಿಡ್ಡಣ್ಣಾಯರ ಪೌರೋಹಿತ್ಯದಲ್ಲಿ ಜರುಗಿತು.


ನೂತನ ಕಟ್ಟಡ ಸಮಿತಿ ಅಧ್ಯಕ್ಷರಾದ ಯೋಗೀಶ್ ಗೌಡ ಜಾಲು, ಕೆಸರು ಕಲ್ಲು ಹಾಕುವ ಮೂಲಕ ನೆರವೇರಿಸಿದರು. ಸಂಘದ ಅಧ್ಯಕ್ಷರಾದ ದೇವಪಾಲ ಅಜ್ರಿ ಉಳಿಯಬೀಡು ಹಾಲೆರೆದು ಪೂಜೆ ಸಲ್ಲಿಸಿದರು.

ಪಟ್ರಮೆ ಪಂಚಾಯತ್ ಅಧ್ಯಕ್ಷರಾದ ಮನೋಜ್‌ಗೌಡ ಅಂಗರಗುಡ್ಡೆ, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ರಾಜೇಶ್.ಪಿ.ಕಾಮತ್, ನೀಲಯ್ಯ ಗೌಡ, ರುಕ್ಮಯ್ಯ ಗೌಡ, ನಿರಂಜನ್ ಜೈನ್, ಪುರಂದರ.ಎಸ್. ಸೂರ್ಯತ್ತಾವು, ಕಟ್ಟಡಕ್ಕೆ ಸ್ಥಳ ನೀಡಿದ ಚಂದ್ರಶೇಖರ ಗೌಡ ಅನಾರು ಹಾಗೂ ಸಂಘದ ನಿರ್ದೇಶಕರು ಮತ್ತು ಊರ ಸದಸ್ಯರು ಉಪಸ್ಥಿತರಿದ್ದರು.

ಶಿಲಾನ್ಯಾಸ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗುರುಪ್ರಸಾದ್ ನಿಡ್ಡಣ್ಣಾಯರು ಮಾತನಾಡಿ ಗೋವಿನ ಮಹತ್ವ ಹಾಗೂ ದೇವರ ಅನುಗ್ರಹ ದೊರೆಯಲೆಂದು ಪ್ರಾರ್ಥಿಸಿದರು. ಪಂಚಾಯತ್‌ನ ನೂತನ ಅಧ್ಯಕ್ಷರಾದ ಮನೋಜ್ ಗೌಡ ಸಹಕಾರಿ ಸಂಘದ ಪರವಾಗಿ ಅಭಿನಂದಿಸಲಾಯಿತು. ಮನೋಜ್ ಗೌಡ ಮಾತನಾಡಿ ಹೈನುಗಾರಿಕೆಯ ಯುವಕರು ಪರಿಶ್ರಮ ಹಾಗೂ ಉತ್ಸಾಹ ಬಹಳ ಮುಖ್ಯವಾಗಿದೆ ಎಂದರು.

ಸಂಘದ ನಿರ್ದೇಶಕರಾದ ರುಕ್ಮಯ್ಯ ಗೌಡ ಪದಳ ಬಂದ ಅತಿಥಿಗಳನ್ನು ಸ್ವಾಗತಿಸಿ, ಸಿಬ್ಬಂದಿ ಶ್ರೀಮತಿ ದೀಕ್ಷಿತಾ.ಎ ಧನ್ಯವಾದವಿತ್ತರು.

Related posts

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಿತ್ತಿ ಪತ್ರಿಕೆ ಅನಾವರಣ

Suddi Udaya

ನೆರಿಯ: ಶ್ರೀ ಕ್ಷೇತ್ರ ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಆಚರಣೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya

ವಿಪರೀತ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕೊಲ್ಲಿಯ ನೇತ್ರಾವತಿ ನದಿ

Suddi Udaya

ಬದನಾಜೆ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!