ಬೆಳಾಲು: ಇಲ್ಲಿನ ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಬೆಳಾಲು ವತಿಯಿಂದ ನರೇಗಾ ಯೋಜನೆಯಡಿ 6.35 ಲಕ್ಷ ರೂ ವೆಚ್ಚದಲ್ಲಿ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇವರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ 2 ಲಕ್ಷ ರೂ ವೆಚ್ಚದಲ್ಲಿ ಒಟ್ಟು 8.35 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಇವರು ಸೆ.21 ರಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾಯಾ ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ಎಳ್ಳುಗದ್ದೆ, ಕೃಷ್ಣಯ್ಯ ಆಚಾರ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷರೂ ಆದ ಗ್ರಾ.ಪಂ. ಸದಸ್ಯ ಸುರೇಂದ್ರ ಗೌಡ ಸುರುಳಿ, ಎಸ್.ಡಿ.ಎಂ.ಸಿ ಸದಸ್ಯರಾದ ಮೋಹನ್ ಗೌಡ, ಹಕ್ಕಿಂ, ಪ್ರಭಾಕರ್, ಶಶಿಕಲಾ, ನಿರ್ಮಲ ಹಾಗೂ ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ಅಂಗನವಾಡಿ ಕಾರ್ಯಕರ್ತೆ ಲೋಕಮ್ಮ ಶಿಕ್ಷಕರಾದ ಜಾನ್ಸಿ ಸಿ.ವಿ, ಅತಿಥಿ ಶಿಕ್ಷಕರಾದ ಪ್ರಜ್ಞಾ, ಗುರುಪ್ರಸನ್ನ, ಗೌರವ ಶಿಕ್ಷಕಿಯಾದ ಯಶಸ್ವಿನಿ, ಹಾಗೂ ಊರಿನ ಪೋಷಕರು, ವಿದ್ಯಾ ಅಭಿಮಾನಿಗಳು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.