24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನ್ಯಾಯತರ್ಪು: ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

ನ್ಯಾಯತರ್ಪು : ನಾಳ ಅಂಗನವಾಡಿ ಕೇಂದ್ರದ ವತಿಯಿಂದ ಗ್ರಾಮ ಪಂಚಾಯತ್ ಕಳಿಯ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪೌಷ್ಟಿಕ ಆಹಾರ ಸಪ್ತಹ ಕಾರ್ಯಕ್ರಮ ನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾಲತರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸುಧಾಕರ ಮಜಲು, ವಲಯ ಮೇಲ್ವಿಚಾರಕಿ ಶ್ರೀಮತಿ ನಂದನ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಪೂಜಾರಿ ನಾಳ, ಸೋಮಪ್ಪ ಗೌಡ ಕುಬಾಯ, ಅಶೋಕ್ ರಾಯಿಮಾರು, ಶ್ರೀಮತಿ ಸೌಭಾಗ್ಯ ರಾಜೇಶ್ ಪಿಜಿನುಕ್ಕು, ಶ್ರೀಮತಿ ರೀತ ಚಂದ್ರಶೇಖರ್, ಆಶಾ ಕಾರ್ಯಕರ್ತ ಶ್ರೀಮತಿ ಶಶಿಕಲಾ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತ ಶ್ರೀಮತಿ ನಾಗವೇಣಿ ರಕ್ತೇಶ್ವರಿ ಪದವು ಮತ್ತು ಹಿರಿಯ ನಾಗರಿಕರಾದ ಶ್ರೀಮತಿ ಅಲಿ ಮಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಳ ಅಂಗನವಾಡಿ ಕಾರ್ಯ ವ್ಯಾಪ್ತಿಯ ಮಕ್ಕಳ ಪೋಷಕರು ಸ್ತ್ರೀ ಶಕ್ತಿ ಪದಾಧಿಕಾರಿಗಳು ಉಪಸ್ಥಿತರಿದ್ದು ಪೌಷ್ಟಿಕಾಂಶ ಆಹಾರದ ಬಗ್ಗೆ ವಲಯ ಮೇಲ್ವಿಚಾರಕಿ ಶ್ರೀಮತಿ ನಂದನ ಮಾಹಿತಿ ನೀಡಿದರು. ಮಕ್ಕಳ ತಾಯಂದಿರು, ಸ್ತ್ರೀಶಕ್ತಿ ಸದಸ್ಯರು ವಿವಿಧ ಬಗೆಯ ಪೌಷ್ಟಿಕ ಆಹಾರ ತಯಾರಿಸಿ ತಂದಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತ ಶ್ರೀಮತಿ ಶಶಿಕಲಾ, ಶ್ರೀಮತಿ ನವೀನ ಕುಮಾರಿ ಸಹಾಯಕಿ ಶ್ರೀಮತಿ ಮೋಹಿನಿ ಸಹಕರಿಸಿದರು. ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಶಶಿಕಲ ಇವರು ಅತಿಥಿಗಳನು ಸ್ವಾಗತಿಸಿ ಕೊನೆಯದಾಗಿ ಧನ್ಯವಾದ ಮಾಡಿದರು.

Related posts

ಕೊಕ್ಕಡ: ಸಂವಿಧಾನ ಜಾಗೃತಿ ಜಾಥಾ

Suddi Udaya

ಕಳಿಯ ನ್ಯಾಯತರ್ಪು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ನ.ಪಂ. ವ್ಯಾಪ್ತಿಯ ಮಾಡ್ಯಾಲೋಟ್ಟುನಲ್ಲಿ ರಸ್ತೆಗೆ ಗುಡ್ಡ ಕುಸಿತ

Suddi Udaya

ಪುದುವೆಟ್ಟು: ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

Suddi Udaya

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ: ಮುಂಡಾಜೆ ಬ್ರಿಟಿಷರ ಕಾಲದ ಹಳೆ ಸೇತುವೆ ತೆರವು ಕಾರ್ಯಾಚರಣೆ ಆರಂಭ

Suddi Udaya

ಉಜಿರೆಯ ಸುಲೋಚನಾ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!