24.3 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

ಬೆಳ್ತಂಗಡಿ: ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹೊಸಂಗಡಿ ಇಲ್ಲಿ ಪ್ರಥಮ ವರ್ಷದ ಶ್ರೀ ಗಣೇಶೋತ್ಸವವು ಬಹಳ ವಿಜೃಂಭಣೆಯಿಂದ ನೆರವೇರಿತು.

ಶಾಲಾ ಪ್ರಾಂಶುಪಾಲರು ಶ್ರೀಧರ್ ಶೆಟ್ಟಿ ಗಣೇಶೋತ್ಸವನ್ನುದ್ದೇಶಿಸಿ ನಮ್ಮ ಶಾಲೆಯಲ್ಲಿ ಇದು ಪ್ರಥಮ ವರ್ಷದ ಗಣೇಶೋತ್ಸವನ್ನು ಆಚರಣೆ ಮಾಡುತ್ತಿದ್ದೇವೆ. ವಸತಿ ಶಾಲೆಯ ಮಕ್ಕಳು ಮತ್ತು ನಮ್ಮ ಶಾಲೆಯ ಸಿಬ್ಬಂದಿ ರಾಧಕೃಷ್ಣ ಮತ್ತು ಶಿಕ್ಷಕ ಸುಧೀರ್ ಇವರು ಕೇವಲ ಎರಡೇ ದಿನಗಳಲ್ಲಿ ಗಣೇಶನ ಸುಂದರವಾದ ಮೂರ್ತಿಯನ್ನು ರಚನೆ ಮಾಡಿದರು. ಮಕ್ಕಳಿಗೆ ಹಬ್ಬದ ಮಹತ್ವ ಮತ್ತು ಶಾಲೆಯಲ್ಲಿ ಕೂಡ ಹಬ್ಬದ ವಿಜೃಂಭಣೆ ಇರಲಿ ಎಲ್ಲಾ ಮಕ್ಕಳು ಕೂಡ ಸಂತೋಷದಿಂದ ಭಾಗವಹಿಸಲಿ ಎಂಬ ದೃಷ್ಟಿಯಿಂದ ಈ ಗಣೇಶೋತ್ಸವನ್ನು ಆಚರಿಸಲಾಯಿತು.

ಗಣೇಶೋತ್ಸವದ ಅಂಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಂದ ಕುಣಿತ ಭಜನೆ , ಭಕ್ತಿ ಪ್ರಧಾನ ನೃತ್ಯ ಕಾರ್ಯಕ್ರಮದೊಂದಿಗೆ ನೆರವೇರಿತು. ಗಣೇಶೋತ್ಸವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಲೆಯ ಹಿತೈಷಿಗಳು ಸೀತಾರಾಮ ರೈ ಮಕ್ಕಳಿಗೆ ಶುಭ ಹಾರೈಸಿದರು.

ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪಂಚಾಯತ್ ಸದಸ್ಯರು, ಹಾಗೂ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ, ವಸತಿ ಶಾಲೆಯ ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕ್ರೀಡಾ ತರಬೇತುದಾರರು ಜಯಂತ್ ಶೆಟ್ಟಿ ಸಹಕಾರದೊಂದಿಗೆ ಸಂಜೆ 5.00 ಗಂಟೆಗೆ ಗಣೇಶನ ಮೂರ್ತಿಯ ಭವ್ಯ ಮೆರವಣಿಗೆಯು ಪಾಲ್ಗುಣಿ ನದಿಯಲ್ಲಿ ಜಲಸ್ತಂಭನದೊಂದಿಗೆ ಮುಕ್ತಾಯಗೊಂಡಿತು.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಾರದೋತ್ಸವ ಅಂಗವಾಗಿ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಗೆ ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೌರವ

Suddi Udaya

ಅಡಿಕೆ ಆಮದು ದರ ಏರಿಕೆಗೆ ಕೇಂದ್ರ ಸರಕಾರ ಬದ್ಧ

Suddi Udaya

ಧರ್ಮಸ್ಥಳ ನೇರ್ತನೆಯಲ್ಲಿ ಕಾಡಾನೆ ದಾಳಿ :ಕೃಷಿಗೆ ಹಾನಿ   

Suddi Udaya

ಪೆರಿಂಜೆ ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ದ್ವೀತಿಯ ಪಿಯುಸಿ ಫಲಿತಾಂಶ: ವೇಣೂರು ಕುಂಭ ಶ್ರೀ ವಿದ್ಯಾ ಸಂಸ್ಥೆಗೆ ಶೇ.100 ಫಲಿತಾಂಶ

Suddi Udaya
error: Content is protected !!