25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಗೃಹರಕ್ಷಕದಳ ಘಟಕಾಧಿಕಾರಿ ಜಯಾನಂದರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’

ಬೆಳ್ತಂಗಡಿ: ಬೆಳ್ತಂಗಡಿ ಗೃಹರಕ್ಷಕ ದಳದಲ್ಲಿ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿ, ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಸಾಧನೆ ಮಾಡಿರುವ ಜಯಾನಂದ ಲಾಯಿಲ ಇವರು 2021, 2022, 2023 ನೇ ಸಾಲಿನ ‘ಮುಖ್ಯಮಂತ್ರಿ ಚಿನ್ನದ ಪದಕ’ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.


ಬೆಳ್ತಂಗಡಿ ತಾಲೂಕಿನ ಗೃಹರಕ್ಷಕ ದಳದಲ್ಲಿ ಘಟಕಾಧಿಕಾರಿಯಾಗಿ ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಯಾನಂದ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಸೆ.22 ರಂದು ಬೆಂಗಳೂರಿನ ಆರ್.ಎ ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಬನ್ನೇರುಘಟ್ಟದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಜಯಾನಂದ ಅವರು ಬೆಳ್ತಂಗಡಿ ತಾಲೂಕು ಪಂಚಾಯತದ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೃತ್ಯ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ಉಪನ್ಯಾಸಕರ ತಂಡವು ಪ್ರಥಮ ಸ್ಥಾನ

Suddi Udaya

ಕಲ್ಮಂಜ ಅಕ್ಷಯ ನಗರ ಗೆಳೆಯರ ಬಳಗದ ರಜತ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ನಿವಾಸಿ ಪದ್ಮಲತಾ ನಿಧನ

Suddi Udaya

ಮಹಿಳಾ ಐಟಿಐಗೆ ಶೇಕಡಾ ನೂರು ಫಲಿತಾಂಶ

Suddi Udaya

ಬೆಳ್ತಂಗಡಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

Suddi Udaya

ಆಪರೇಷನ್ ಸಿಂಧೂರ: ಕುರಾಯ-ಬಂದಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ

Suddi Udaya
error: Content is protected !!