April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

ಶಿಶಿಲ : ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.25 ರಂದು ಸಮುದಾಯ ಭವನ ನಾಗನಡ್ಕ ಶಿಶಿಲದಲ್ಲಿ ದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂತೋಷ್ ಎ.ಎಸ್ ರವರು ವಹಿಸಿ ಮಾತನಾಡಿ ಸದಸ್ಯರಿಗೆ ಶೇ. 10 ಡಿವಿಡೆಂಟ್ ಘೋಷಿಸಿದರು.

ಸಭೆಯಲ್ಲಿ ನಿವೃತ್ತ ಪಶುವೈದ್ಯಾಧಿಕಾರಿ ಡಾ| ಯಾದವ ಮತ್ತು ಮಾಜಿ ಅಧ್ಯಕ್ಷ ಯೋಗೀಶ್ ದಾಮ್ಲೆ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ವಲಯ ಹಾಲು ಒಕ್ಕೂಟ ಪಶುವೈದ್ಯಾಧಿಕಾರಿ ಡಾ. ಜಿತೇಂದ್ರ , ಬೆಳ್ತಂಗಡಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಬಿ. ಕಾಮತ್, ನಿರ್ದೇಶಕರುಗಳಾದ ಈಶ್ವರಪ್ಪ ಗೌಡ, ಆನಂದ ಡಿ., ಚಂದ್ರಶೇಖರ ಎಂ., ಕೊರಗಪ್ಪ ಗೌಡ, ಶೇಖರ ಪುರುಷ, ಡಿ.ಸುಂದರ, ಡಿ.ಸುಂದರ, ಶ್ರೀಮತಿ ಭವಾನಿ ಜಿ., ಶ್ರೀಮತಿ ಸೇಸಮ್ಮ ಕೆ., ಶ್ರೀಮತಿ ಸರೋಜ ಕೆ, ಹಾಲು ಪರೀಕ್ಷಕಿ ಶ್ರೀಮತಿ ಶೋಭಾ ಕೆ. ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಡಿ. ಲಕ್ಷ್ಮೀಶ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮೀಶ ಬಿ. ನಿರೂಪಿಸಿದರು. ಸಿಬ್ಬಂದಿ ಶೋಧನ್ ಡಿ. ಧನ್ಯವಾದವಿತ್ತರು.

Related posts

ಅರಸಿನಮಕ್ಕಿ: ವೀಸಾ ಕೊಡಿಸುವುದಾಗಿ ನಂಬಿಸಿ ರೂ. 2.50 ಲಕ್ಷ ವಂಚನೆ-ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

Suddi Udaya

“ಉತ್ಕರ್ಷ” ಸಾಂಸ್ಕೃತಿಕ ಶೈಕ್ಷಣಿಕ ಸ್ಪರ್ಧೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ಓವರಲ್ ಚಾಂಪಿಯನ್ ಶಿಪ್

Suddi Udaya

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪ್ರಮುಖರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಚುನಾವಣಾ ಪ್ರಚಾರ

Suddi Udaya

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Suddi Udaya

ಹೊಸ್ಮಾರು ಸಿದ್ಧರವನ ಕ್ಷೇತ್ರದಲ್ಲಿ ಪೂಜ್ಯ ಮುಕ್ತಿಮತಿ ಮಾತಾಜಿ ಚಾತುರ್ಮಾಸ್ಯ

Suddi Udaya
error: Content is protected !!