April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಶ್ರೀ ಧ. ಮಂ. ಪಾಲಿಟೆಕ್ನಿಕ್ ರಾಷ್ಟೀಯ ಸೇವಾ ಯೋಜನೆ ಘಟಕ , ಯುವ ರೆಡ್ ಕ್ರಾಸ್ ಘಟಕ, ರೋಟರಿ ಕ್ಲಬ್ ಬೆಳ್ತಂಗಡಿ ಸಹ ಭಾಗಿತ್ವದಲ್ಲಿ ಯುವ ಜನತೆ ಮತ್ತು ಆರೋಗ್ಯದ ಉಪನ್ಯಾಸ ಕಾರ್ಯಕ್ರಮ


ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಉಜಿರೆಯ ಯುವ ರೆಡ್ ಕ್ರಾಸ್ ಘಟಕ , ಎನ್ ಎಸ್ ಎಸ್ ಘಟಕ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಯುವ ಜನತೆ ಮತ್ತು ಆರೋಗ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಸೆ.27 ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜುನ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ| ಪ್ರದೀಪ್ ಕುಮಾರ್ ಆಟಿಕುಕ್ಕೆ , ಆರೋಗ್ಯ ಕ್ಲಿನಿಕ್ ನಾವೂರ್ ಬೆಳ್ತಂಗಡಿ ಇವರು ಆಗಮಿಸಿ ಮಕ್ಕಳಿಗೆ ಯುವ ಜನತೆ ಮತ್ತು ಆರೋಗ್ಯದ ಬಗ್ಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿಕೊಟ್ಟರು .ಇದರ ಜೊತೆ ಅತಿಥಿಯಾಗಿ ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಅನಂತ್ ಭಟ್ ಮಚ್ಚಿನ ಮತ್ತು ರಾಷ್ಟೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಯಾದ ಪ್ರಕಾಶ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿಯಾದ ಅವನೀಶ್ ಪಿ . ಇವರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು . ಹಾಗೂ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಮತ್ತು ಮಕ್ಕಳು ಭಾಗವಹಿಸಿದ್ದರು.

Related posts

ಭಾರಿ ಮಳೆಯಿಂದಾಗಿ ಕಾರ್ಯತ್ತಡ್ಕ ಕುಲಾಡಿ ಸೇತುವೆಯ ಬಳಿ ಧರೆಕುಸಿತ: ಅಡಿಕೆ ಗಿಡಗಳು ನೀರು ಪಾಲು

Suddi Udaya

ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

Suddi Udaya

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ: ಕನ್ಯಾಡಿಯ ಕೆ.ವಿ ಸ್ಟೋರ್ಸ್ ನಲ್ಲಿ ಸಿಹಿ ವಿತರಣೆ

Suddi Udaya

ಮಡಂತ್ಯಾರು ಗ್ರಾ.ಪಂ ನಿಂದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ಕರಪತ್ರ ವಿತರಣೆ

Suddi Udaya

ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬಳಂಜ ಶಾಲೆಗೆ ಭೇಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಬಳಂಜ ಶಾಲೆಗೆ ರೂ.1ಲಕ್ಷ ಮೊತ್ತದ ಯೋಜನೆಗಳ ಹಸ್ತಾಂತರ

Suddi Udaya

ಉಯ್ಯಾಲೆಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವು

Suddi Udaya
error: Content is protected !!