ಬೆಳ್ತಂಗಡಿ: ಕಾಡಾನೆಗಳ ಹಾವಳಿ ತಡೆಗಟ್ಟುವ ಕುರಿತು, ಬಂದಾಗ ಬೇಕಾದ ಮುನ್ನೆಚ್ಚರಿಕೆ, ಅವುಗಳು ಬರದಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಾಹಿತಿ ಕಾರ್ಯಕ್ರಮ ಜರಗಿತು.
ಆನೆ ಹಾವಳಿ ಪ್ರದೇಶಗಳಾದ ಧರ್ಮಸ್ಥಳದ ನೇರ್ತನೆ, ಮುಂಡಾಜೆಯ ದುಂಬೆಟ್ಟು, ಚಾರ್ಮಾಡಿ ಪರ್ಲಾಣಿ, ಚಿಬಿದ್ರೆಯ ಬಾರೆ ಮೊದಲಾದ ಕಡೆ ಬೆಳ್ತಂಗಡಿ ಅರಣ್ಯ ಇಲಾಖೆ ವತಿಯಿಂದ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಹಿರಿಯ ಆನೆ ತಜ್ಞ ಹಾಗೂ ನಿವೃತ್ತ ಪಶುವೈದ್ಯಾಧಿಕಾರಿ ಅಸ್ಸಾಂನ ಡಾ.ರುದ್ರಾದಿತ್ಯ ಮಾಹಿತಿ ನೀಡಿ,
ಕಾಡಾನೆಗಳ ಓಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಆರ್ ಎಫ್ ಒ ಮೋಹನ್ ಕುಮಾರ್ ಬಿಜಿ, ಡಿಆರ್ ಎಫ್ ಒಗಳಾದ ಹರಿಪ್ರಸಾದ್ ರವೀಂದ್ರ ಅಂಕಲಗಿ, ರಾಜಶೇಖರ್, ರವೀಂದ್ರ ಕೆ, ಭವಾನಿ ಶಂಕರ್, ರಾಜೇಶ್, ಅಖಿಲೇಶ್, ಪರಮೇಶ್ವರ, ಸದಾನಂದ, ಬಾಲಕೃಷ್ಣ, ಕುಶಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸ್ಥಳೀಯರಾದ ತಂಗಚ್ಚನ್, ಜೋಸೆಫ್ ಜಾರ್ಜ್, ಜಾನ್ಸನ್ ಸಚಿನ್ ಭಿಡೆ, ಜಗದೀಶ ನಾಯ್ಕ್ , ಕಜೆ ವೆಂಕಟೇಶ್ವರ ಭಟ್ ಸಿದ್ದಿಕ್ ಮತ್ತಿತರರು ಸಹಕರಿಸಿದರು.