ಬೆಳ್ತಂಗಡಿ : ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ), ಉಡುಪಿ ಜಿಲ್ಲೆ ಇದರ 70ನೇ ಕೇಂದ್ರೀಯ ಮಹಾಧಿವೇಶನ, ಕಾಸರಗೋಡಿನ ಕುಮಾರಮಂಗಲದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅದ್ದೂರಿಯಾಗಿ ಇತ್ತೀಚೆಗೆ ಜರುಗಿತು.
ಈ ಸಂಧರ್ಭದಲ್ಲಿ ಬೆಳ್ತಂಗಡಿ ಕೂ. ಮ. ಜ. ಇದರ ಮಹಿಳಾವೇದಿಕೆಯ ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮ ವನ್ನು ನೀಡಿದರು.
ಹಾದಿ ತಪ್ಪುತ್ತಿರುವ ಯುವ ಜನಾಂಗ, ತಮ್ಮ ಸಂಸ್ಕೃತಿಯ, ದೇಶದ ಅಸ್ಮಿತೆಯನ್ನು ಮರೆಯದೆ ಹೊಸತನವನ್ನು ಮೈಗೂಡಿಸಿಕೊಂಡು ಭಾರತವನ್ನು ವಿಶ್ವಗುರು ಮಾಡುವಲ್ಲಿ ತಮ್ಮ ಅಳಿಲುಸೇವೆ ನೀಡಬೇಕು ಎಂಬ ಸತ್ವವನ್ನು ಸಾರುವ ವಿದ್ಯಾಶ್ರೀ ಅಡೂರ್ ಅವರ ಪರಿಕಲ್ಪನೆಯ ವೈವಿಧ್ಯಪೂರ್ಣ ಕಾರ್ಯಕ್ರಮ ಇದಾಗಿದ್ದು ಸೂರ್ಯನಮಸ್ಕಾರ, ಕುಣಿತಭಜನೆ, ಜಾನಪದ ನೃತ್ಯ, ಇತ್ಯಾದಿಗಳನ್ನು ಒಳಗೊಂಡಿತ್ತು.
ಯೋಗಾಭ್ಯಾಸದಲ್ಲಿ ಶಿವಕಿರಣ ಹೊಳ್ಳ, ಸುಶಾಂತ್ ಹೊಳ್ಳ, ಕುಣಿತ ಭಜನೆಯಲ್ಲಿ ನಳಿನಿ ಹೊಳ್ಳ, ಸುಜಾತ ರಾವ್, ಲಕ್ಷ್ಮಿ ಹೊಳ್ಳ, ಧನಲಕ್ಷ್ಮಿಹೊಳ್ಳ, ಮಹಾಲಕ್ಷ್ಮಿ, ಗೀತಾ ರಾವ್, ಶಾಂತಲ ಕಾರಂತ್, ಸವಿತ ಹೊಳ್ಳ, ಜಾನಪದ ನೃತ್ಯದಲ್ಲಿ ವಿದ್ಯಾಶ್ರೀ ಅಡೂರ್. ಕವಿತಾ ಹೊಳ್ಳ, ಲಾವಣ್ಯ, ರಕ್ಷಿತಾ, ಆಶಾ, ಅಕ್ಷತಾ, ಸಂತೋಷಿನಿ ಮತ್ತು ರೂಪಕದಲ್ಲಿ ಅಂಜನಾ ಭಾಗವಹಿಸಿದ್ದರು.