September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ನಿತ್ಯಾನಂದ ನಾವರರವರು ಒಂದೇ ದಿನದಲ್ಲಿ112 ಜೀವ ವಿಮಾ ಪಾಲಿಸಿ ಮಾಡಿ ಒನ್ ಡೇ ಸೆಂಚುರಿಯನ್ ಸಾಧನೆ

ಬೆಳ್ತಂಗಡಿ: ಭಾರತೀಯ ಜೀವವಿಮಾ ನಿಗಮ ಮಂಗಳೂರು ಶಾಖೆ 1 ರ ಸೀನಿಯರ್ ಬ್ಯುಸಿನೆಸ್ ಅಸೋಸಿಯೇಟ್ ಕೃಷ್ಣ ಎಂ ಹೆಗಡೆಯವರ ಯೂನಿಟಿನ ಪ್ರತಿನಿಧಿಯಾಗಿರುವ ನಿತ್ಯಾನಂದ ನಾವರ ಇವರು ಒಂದೇ ದಿನದಲ್ಲಿ 112 ಜೀವ ವಿಮಾ ಪಾಲಿಸಿಗಳನ್ನುಮಾಡಿ ಒನ್ ಡೇ ಸೆಂಚುರಿಯನ್ ಎಂಬ ಸಾಧನೆಯನ್ನು ಈ ಆರ್ಥಿಕ ವರ್ಷದಲ್ಲಿ ಉಡುಪಿ ವಿಭಾಗದಲ್ಲೇ ಪ್ರಥಮವಾಗಿ ಮಾಡಿರುತ್ತಾರೆ.

ಇವರು ಉಜಿರೆಯಲ್ಲಿ ಎನ್ ಎನ್ ಬಾಟಲಿಂಗ್ ಕಂಪನಿ ಉದ್ಯಮವನ್ನು ನಡೆಸುತ್ತಿದ್ದು, ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಪ್ರಾಂತ್ಯ ಅಧ್ಯಕ್ಷರಾಗಿದ್ದು, ಪ್ರಸ್ತುತ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಡಾಕ್ಟರ್ ಮೇಲ್ವಿನ್ ಡಿಸೋಜಾ ರವರ ಸಂಪುಟದಲ್ಲಿ ಜಿಎಸ್‌ಟಿ ಸಹ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲ.ನಿತ್ಯಾನಂದ ನಾವರರವರು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ನಾರಾವಿ ವಲಯದ ಅಧ್ಯಕ್ಷರಾಗಿ, ಶ್ರೀ ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಮಾಜಿ ಕೋಶಾಧಿಕಾರಿಯಾಗಿ,ಯುವವಾಹಿನಿ ಬೆಳ್ತಂಗಡಿ ಘಟಕ ಇದರ ಗೌರವ ಸಲಹೆಗಾರರಾಗಿ ಹಲವಾರು ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ.

Related posts

ಅಳದಂಗಡಿ: ನೊಚ್ಚ ಮನೆತನದ ಕುವರಿ ನಿಯತಿ ಅಮೇರಿಕಾದಲ್ಲಿ ಯಕ್ಷಗಾನ ನಾಟ್ಯ ಪ್ರದರ್ಶನ

Suddi Udaya

ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಟಿ. ರವಿಚಂದ್ರ ರಾವ್

Suddi Udaya

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

Suddi Udaya

ರೋಟರಿ ಕ್ಲಬ್ ಹಾಗೂ ಕಾನ್ ಫಿನ್ ಹೋಮ್ಸ್ ಸಹಕಾರದಲ್ಲಿ ಸಿಯೋನ್ ಆಶ್ರಮದ ನಿವಾಸಿಗಳಿಗೆ 135 ಮಂಚಗಳು ಹಾಗೂ ಹಾಸಿಗೆ ಸಾಮಗ್ರಿಗಳ ಕೊಡುಗೆ

Suddi Udaya

ಅರಸಿನಮಕ್ಕಿ: ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಶ್ರೀರಾಮೋತ್ಸವ ಮತ್ತು ಹೋಳಿಗೆ ಹಬ್ಬ

Suddi Udaya

ಅಳದಂಗಡಿಯಲ್ಲಿ ಮಕ್ಕಳಿಂದ ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ

Suddi Udaya
error: Content is protected !!