September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.2: ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಬೆಳ್ತಂಗಡಿ, ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಶೌರ್ಯ' ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದೊಂದಿಗೆಗಾಂಧಿಜಯಂತಿ; ಸಂಭ್ರಮಾಚರಣೆಯ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಅ.೨ರಂದು ಶ್ರೀ ಧ.ಮಂ ಕಲಾಭವನದಲ್ಲಿ ಜರುಗಲಿದೆ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಟ್ರಸ್ಟ್‌ನ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ತಿಳಿಸಿದ್ದಾರೆ. ಅಧ್ಯಕ್ಷತೆ ಹರೀಶ್ ಪೂಂಜ ವಹಿಸಲಿದ್ದು, ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ವಹಿಸಲಿದ್ದಾರೆ. ಆಶೀರ್ವಚನವನ್ನು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರ. ವಂ, ಸ್ವಾಮಿ ವೊಲ್ಡರ್ ಒಸ್ಟಲ್ ಡಿ’ಮೆಲ್ಲೊ ಪ್ರಧಾನ ಧರ್ಮಗುರುಗಳು ಹೋಲಿ ರೆಡಿಮ ಚರ್ಚ್, ಬೆಳ್ತಂಗಡಿ, ಮೌಲಾನ ಅಶ್ರಫ್ ಹಿಮಾಮಿ ಧರ್ಮಗುರುಗಳು, ಜುಮ್ಮಾ ಮಸೀದಿ, ಹೊಸನಗರ ನೀಡಲಿದ್ದಾರೆ.
ಸಾಧಕರಿಗೆ ಸನ್ಮಾನವನ್ನು ಡಾ| ಎಲ್. ಹೆಚ್. ಮಂಜುನಾಥ್ ನೆರವೇರಿಸಲಿದ್ದಾರೆ. ಕು. ಸಹನಾ ಕುಂದರ್, ನ್ಯಾಯವಾದಿಗಳು, ಉಡುಪಿ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಪದ್ಮನಾಭ ಶೆಟ್ಟಿ ಅಧ್ಯಕ್ಷರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ದ.ಕ., ಆರ್. ಬಿ. ಹೆಬ್ಬಳ್ಳಿ, ಉದ್ಯಮಿಗಳು, ಮು೦ಬೈ ಭಾಗವಹಿಸಲಿದ್ದಾರೆ. ಕೆ. ವಸಂತ ಸಾಲ್ಯಾನ್, ಸ್ಥಾಪಕಾರ ಕರು, ಜನಜಾಗೃತಿ ವೇದಿಕೆ, ರೊನಾಲ್ಡ್ ಡಿ’ಸೋಜಾ, ಅಕ್ಷಕರು, ಜನಜಾಗೃತಿ ವೇದಿಕೆ ಬಂಟ್ವಾಳ, ಮಹಾಬಲ ಕುಲಾಲ್, ನಿರ್ದೇಶಕರು, ದಕ-೧ ಜಿಲ್ಲೆ, ಸೀತಾರಾಮ ಆ ಕೇಂದ್ರ ಒಕ್ಕೂಟದ ಅಧ್ಯಕ್ಷರು, ಸದಾನಂದ ಬಂಗೇರ, ಕೇ೦ದ್ರ ಒಕ್ಕೂಟದ ಅಧ್ಯಕ್ಷರು, ಗುರುವಾಯನಕೆರೆ, ಚಿದಾನಂದ ರೈ, ಕಕ್ಯ ಕೇಂದ್ರ ಒಕ್ಕೂಟದ ಅಧ್ಯಕ್ಷರು, ಬಂಟ್ವಾಳ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

Related posts

ಲಾಯಿಲ ಗ್ರಾಮಸಭೆಯಲ್ಲಿ ಗ್ರಾ.ಪಂ ಮತ್ತು ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಶೇಖರ್ ಲಾಯಿಲ ಪಂಚಾಯತ್ ಸಭಾಭವನದ ಎದುರು ನಿದ್ದೆ ಮಾಡುವ ಮೂಲಕ ಆಕ್ರೋಶ

Suddi Udaya

ಕುಕ್ಕೇಡಿ: ಚಿರತೆ ದಾಳಿಗೆ ಹಸು ಬಲಿ

Suddi Udaya

ದಿ| ಪ್ರವೀಣ್ ಬೆಳಾಲು ರವರ ಮನೆಗೆ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ವೃದ್ದಾಶ್ರಮಕ್ಕೆ ಭೇಟಿ,ಗೃಹೋಪಯೋಗಿ ವಸ್ತುಗಳ ಹಸ್ತಾಂತರ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ದಿ| ಕಾಶ್ಮೀರಿ ಮೆನೇಜಸ್‌ ರವರಿಗೆ ಶ್ರದ್ಧಾಂಜಲಿ ಸಭೆ

Suddi Udaya

ಬೆಳ್ತಂಗಡಿ: ಡಾ. ಸುಶ್ಮಿತಾ ಸಿ ಎಚ್ ರವರಿಗೆ ಪಿಹೆಚ್ ಡಿ ಪದವಿ

Suddi Udaya
error: Content is protected !!