ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅರಸಿನಮಕ್ಕಿ ಶಾಖೆಯ ಉದ್ಘಾಟನಾ ಸಮಾರಂಭವು ಸೆ. 29 ರಂದು ನಡೆಯಿತು
ಮಂಗಳೂರು ಕಾವೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ನೂತನ ಸಂಸ್ಥೆಯನ್ನು ಉದ್ಘಾಟಿಸಿ ನಂಬಿಕೆ,ಪ್ರೀತಿ,ವಿಶ್ವಾಸದಿಂದ ಸಂಸ್ಥೆಯು ಪ್ರಗತಿಯನ್ನು ಸಾಧಿಸಿಸಲು ಸಾಧ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಕಾಳಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ರಂಜನ್ ಜಿ. ಗೌಡ ವಹಿಸಿದ್ದರು.
ಪ್ರಸನ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ,ಮಾಜಿ ಸಚಿವರಾದ ಗಂಗಾಧರ ಗೌಡ ನಿರಖು ಠೇವಣಿ ಪತ್ರದ ವಿತರಣೆ ಮಾಡಿ ಗ್ರಾಮೀಣ ಭಾಗದ ಆರ್ಥಿಕ ಚೈತನ್ಯ ಹೆಚ್ಚಿಸಲು ಸಹಕಾರಿ ಕ್ಷೇತ್ರದಿಂದ ಸಾಧ್ಯ ಎಂದರು.
ಸ್ವಸಹಾಯ ಸಂಘದ ಪುಸ್ತಕ ವಿತರಣೆಯನ್ನು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೇರಿಮಾರು ನೇರವೇರಿಸಿದರು. ಭದ್ರತಾ ಕೊಠಡಿ ಉದ್ಘಾಟನೆನ್ನು ವಾಣಿ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಹೆಚ್.ಪದ್ಮ ಗೌಡ ಮಾಡಿದರು. ಗಣಕಯಂತ್ರ ಉದ್ಘಾಟನೆಯನ್ನು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಮಾಡಿ ಶುಭಕೋರಿದರು.ಪ್ರಥಮ ಸಾಲಪತ್ರವನ್ನು ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ವಿತರಿಸಿದರು. ಉಳಿತಾಯ ಖಾತೆ ಪತ್ರವನ್ನು ಅರಸಿನಮಕ್ಕಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ವಿತರಿಸಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಿಲ್ಲಾ ಸಂಯೋಜಕರಾದ ವಿಜಯ್ ಬಿ.ಎಸ್, ಕಟ್ಟಡ ಮಾಲಕರಾದ ಧರ್ಣಪ್ಪ ಗೌಡ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸುಂದರ ಗೌಡ ಇಚ್ಚಿಲ,ನಿರ್ದೇಶಕರಾದ ಕೆ. ಶಿವಕಾಂತ ಎನ್,ಲಕ್ಷ್ಮಣ ಗೌಡ ಕೇಶವ ಗೌಡ ಪಿ, ದಾಮೋದರ ಗೌಡ ಸುರುಳಿ, ಕೆ. ಜಯಂತ ಗೌಡ ಗುರಿಪಳ್ಳ, ಸರೋಜಿನಿ ವಿಜಯ ಕುಮಾರ್ ಗೌಡ, ಡಿ. ಚೇತನಾ ಚಂದ್ರಶೇಖರ ಗೌಡ,ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ,
ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
ಸಂಸ್ಥೆಯ ಅಧ್ಯಕ್ಷ ರಂಜನ್ ಜಿ ಗೌಡ, ಸ್ವಾಗತಿಸಿದರು, ಎನ್.ಲಕ್ಷ್ಮಣ ಗೌಡ ಪ್ರಾಸ್ತಾವಿಕ ಮಾತನ್ನಾಡಿದರು.ಸಂಗೀತ ಗೌಡ ಬೊಳ್ಮ ಕಾರ್ಯಕ್ರಮ ನಿರೂಪಿಸಿದರು.ಚೇತಬಾ ಚಂದ್ರಶೇಖರ್ ವಂದಿಸಿದರು.