September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಬೊಳ್ಳಾಜೆ- ಡೆಂಜೋಲಿ ರಸ್ತೆ ಮದ್ಯೆ ವಿದ್ಯುತ್ ತಂತಿ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ಸಾರ್ವಜನಿಕರು: ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಬಳಂಜ ಗ್ರಾ‌.ಪಂ ಹಾಗೂ ಅರಣ್ಯ ಇಲಾಖೆಗೆ ಮನವಿ

ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳಾಜೆ ಮತ್ತು ಡೆಂಜೋಲಿ ಸಂಪರ್ಕಿಸುವ ರಸ್ತೆಯ ಬಗ್ಯೋಟ್ಟು ಸಮೀಪ ಮರವೊಂದು ನ.28 ರಂದು ಸಂಜೆ ರಸ್ತೆಗೆ ಅಡ್ಡವಾಗಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು ಇಂದು ಬೆಳಿಗ್ಗೆ ಸಾರ್ವಜನಿಕರು ತೆರವುಗೊಳಿಸಿದರು.

ಸ್ಥಳಕ್ಕೆ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಅಳದಂಗಡಿ ಉಪ ವಲಯಾರಣ್ಯಧಿಕಾರಿ ಸುರೇಶ್ ಗೌಡ,ಲೈನ್ ಮ್ಯಾನ್ ಜಟ್ಡಿಂಗ ರವರು ಆಗಮಿಸಿ ಪರಿಶೀಲಿಸಿದರು .ಬೊಳ್ಳಾಜೆಯಿಂದ ಡೆಂಜೋಲಿ ತನಕ ರಸ್ತೆ ಬದಿ ಅಪಾಯಕಾರಿ ಮರಗಳು ಬೆಳೆದಿದ್ದು ಅಪಾಯಕಾರಿ ಮರಗಳನ್ನು ಶೀಘ್ರವಾಗಿ ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದರು. ಅರಣ್ಯ ಅಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರು ಮರ ತೆರವುಗೊಳಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಕಾಸಿಂ ಕಟ್ಟೆ, ಸಂತೋಷ್ ಪಿ ಕೋಟ್ಯಾನ್, ಜಗದೀಶ್ ಪೂಜಾರಿ ಬಳ್ಳಿದಡ್ಡ, ರಕ್ಷಿತ್ ಬಗ್ಯೋಟ್ಟು ಉಪಸ್ಥಿತರಿದ್ದರು .

Related posts

ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಮಹಾವಿದ್ಯಾಲಯದಲ್ಲಿ ‘ಕಲಾಮೃತಂ’ ಸಾಂಸ್ಕೃತಿಕ ಉತ್ಸವ ಯಶಸ್ವಿ

Suddi Udaya

ಸೋಮಂತಡ್ಕ ನಿವಾಸಿ ಮೇರಿ ಒ.ಎ. ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ನಡಿಗುತ್ತು ನಿವಾಸಿ ಶ್ರೀಮತಿ ಪುಷ್ಪಾವತಿ ನಿಧನ

Suddi Udaya

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಜ.22ರಂದು ದ.ಕ ಜಿಲ್ಲೆಯಾದ್ಯಂತ ಬಾರ್‌, ಮದ್ಯದ ಅಂಗಡಿ ಬಂದ್ : ಜಿಲ್ಲಾಧಿಕಾರಿ ಆದೇಶ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಬಡಗಕಾರಂದೂರು ಶಾಲೆಯಲ್ಲಿ ಪರಿಸರ ದಿನಾಚರಣೆ – ಪುಸ್ತಕ ಪೂಜೆ

Suddi Udaya
error: Content is protected !!