23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ: ರಾ.ಸೇ ಯೋಜನೆಯ ವಿಶೇಷ ಕಾರ್ಯಾಗಾರ ಉದ್ಘಾಟನೆ

ಉಜಿರೆ : ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಪಡೆಯುವುದು ಮಾತ್ರವಲ್ಲ ನಾವು ಅದರಲ್ಲಿ ಹೇಗೆ ತೊಡಗಿಸಿಕೊಂಡಿದ್ದೇನೆ , ನನ್ನ ವ್ಯಕ್ತಿತ್ವಕ್ಕೆ ಯಾವ ವಿಷಯಗಳನ್ನು ಪಡೆದುಕೊಂಡಿದ್ದೇವೆ ಎನ್ನುವುದು ಮುಖ್ಯ. ಹೊಂದಾಣಿಕೆಯ ಜೀವನ , ಪರಸ್ಪರ ತಿಳುವಳಿಕೆ ಇತ್ಯಾದಿಗಳಿಗೆ ರಾ.ಸೇ ಯೋಜನೆಯ ಶಿಬಿರಗಳು ಪೂರಕ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ನಡೆದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆನಂತರ ನಡೆದ ಕಾರ್ಯಾಗಾರದಲ್ಲಿ ಹಿರಿಯ ಸ್ವಯಂ ಸೇವಕರಾದ ಧನುಷ್ ಕೆ.ಪಿ , ಶಶಿಕಿರಣ್ ಹಾಗೂ ಉಜಿರೆ ಶ್ರೀ ಧ.ಮಂ ಪದವಿ ಕಾಲೇಜಿನ ರಾ.ಸೇ ಯೋಜನೆಯ ಸ್ವಯಂ ಸೇವಕರಾದ ನಿಸರ್ಗ ಹಾಗೂ ಯಕ್ಷಿತ್ ಅವರು ವರದಿ ತಯಾರಿಕೆ, ಸಿಂಚನಾ ಅವರು ಕಾರ್ಯಕ್ರಮ ನಿರ್ವಹಣೆ ಬಗ್ಗೆ, ಅನಂತ್ ಅವರು ಭಿತ್ತಿಪತ್ರಿಕೆ ಬಗ್ಗೆ ಮಾಹಿತಿ ನೀಡಿದರು. ಭೂಮಿಕಾ ಹಾಗೂ ಅನೇಕ ಹಿರಿಯ ಸ್ವಯಂ ಸೇವಕರು ಸಹಕಾರ ನೀಡಿದರು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.

ಸ್ವಯಂ ಸೇವಕ ಆದಿತ್ಯ ನಿರೂಪಿಸಿ , ವಂದಿಸಿದರು.

Related posts

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ವಿಜೃಂಭಣೆಯ ಸ್ವಾತ್ರಂತ್ರ್ಯೋತ್ಸವ ಆಚರಣೆ

Suddi Udaya

ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾಯನಕೆರೆ ಸುಪ್ರೀಂ ಎಲೆಕ್ಟ್ರಾನಿಕ್ ಸಂಸ್ಥೆಯಲ್ಲಿ ಮೆಗಾ ಡಿಸ್ಕೌಂಟ್ ಸೇಲ್

Suddi Udaya

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya

ನ.13: ಬೆಳ್ತಂಗಡಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ ಕಾರ್ಯಕ್ರಮ

Suddi Udaya

ಕೋವಿಡ್ ನಲ್ಲಿ ಹೆತ್ತವರನ್ನು ಕಳೆದುಕೊಂಡವರ ಮಕ್ಕಳಿಗೆ ಶಿಕ್ಷಣಕ್ಕಾಗಿ ಶುಲ್ಕ ವಿತರಣೆ

Suddi Udaya

ಮೇ 26: ವಿದ್ಯುತ್ ನಿಲುಗಡೆ

Suddi Udaya
error: Content is protected !!