23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮದುವೆ ಸಮಾರಂಭದಲ್ಲಿ ಮಾದರಿ ಕಾರ್ಯ ವರನ ತಂದೆ ಮುಳುಗು ತಜ್ಞ ರಿಗೆ ಬಂಧು ಮಿತ್ರರಿಂದ ಸನ್ಮಾನ: ತನ್ನ ಪ್ರಾಯ ಲೆಕ್ಕಿಸದೆ ಇನ್ನೊಬ್ಬರ ಪ್ರಾಣ ರಕ್ಷಿಸುವ ಬಂದಾರು ಮಹಮ್ಮದರ ಸೇವೆ ಅನುಕರಣೀಯ :ಕೆ. ಎಂ.ಮುಸ್ತಫ

*ಬೆಳ್ತಂಗಡಿ ತಾಲೂಕಿನ ಬಂದಾರು ಮಹಮ್ಮದ್ ರವರು ಕಳೆದ 35 ವರ್ಷಗಳಿಂದ ವಿಪತ್ತು ಸಂಭವಿಸಿದಾಗ ಮುಳುಗು ತಜ್ಞರಾಗಿ, ಅಪಘಾತ ಸೇವೆ ಇನ್ನಿತರ ತುರ್ತು ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಧಾವಿಸುವವರು, ಈಗಲೂ ತನ್ನ 63 ವರ್ಷ ಪ್ರಾಯದಲ್ಲೂ ನೀರಿಗೆ ಧುಮುಕುವ ಸಾಹಸಿ, ಹಲವು ಜಿಲ್ಲಾ, ರಾಜ್ಯ ಪ್ರಶಸ್ತಿ ಪಡೆದಿರುವ ಬಂದಾರು ಮಹಮ್ಮದ್ ರಿಗೆ ಇಂದು ಮಗನ ಮದುವೆ ಸಂಭ್ರಮಗುರುವಾಯನಕೆರೆ ಶಾದಿಮಹಲ್ ನಲ್ಲಿ ಬಂದಾರು ಮಹಮ್ಮದ್ ರವರ ಪುತ್ರ ಅಬ್ದುಲ್ ಸಮದ್ ಎಂಬವರ ಮದುವೆ ಸಮಾರಂಭ, ಈ ಸಮಾರಂಭ ದಲ್ಲಿ ವಧು ಮತ್ತು ವರನ ಬಂಧು, ಮಿತ್ರಾದಿಗಳು, ಹಿತೈಷಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಮಾಜಕ್ಕೆ ಮಾದರಿ ಕಾರ್ಯ ಮಾಡಿ ಸಮುದಾಯಕ್ಕೆ ಕೀರ್ತಿ ತಂದ,ವರನ ತಂದೆ ಕುಟುಂಬದ ಯಜಮಾನ ಮಹಮ್ಮದ್ ಬಂದಾರು ರವರನ್ನು ಈ ಶುಭ ಕಾರ್ಯದಲ್ಲಿ ಸನ್ಮಾನ ಮಾಡಲಾಯಿತು

ಸನ್ಮಾನ ನೆರವೇರಿಸಿ ಮಾತನಾಡಿದ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ ಮಾತನಾಡಿ ಬಂದಾರು ಮಹಮ್ಮದ್ ರವರು ಯಾವುದೇ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸುವ ಸೇವೆ ಯುವಕರಿಗೆ ಆದರ್ಶ, ಜಾತಿ ಮತ ಭೇದವಿಲ್ಲದೆ ಮಾಡುವ ಇವರ ಮಾನವೀಯತೆಯ ಕೆಲಸ ಪ್ರವಾದಿ ಯವರ ಸಂದೇಶದ ಭಾಗ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಮ್ಮದ್ ರು ನೀರಕಟ್ಟೆ ಡ್ಯಾಮ್ ನಿಂದ ಮುನ್ಸೂಚನೆ ಇಲ್ಲದೆ ನೀರು ಬಿಟ್ಟ ಸಂದರ್ಭದಲ್ಲಿ ಹಾಯ್ ದೋಣಿಯಲ್ಲಿ ಬರುತ್ತಿದ್ದ ತಿಮ್ಮೆಗೌಡ ಎಂಬವರನ್ನು ಅಪಾಯ ಲೆಕ್ಕಿಸದೆ ನೀರಿಗೆ ಎತ್ತರದಿಂದ ಧಮುಕಿ ಪ್ರಾಣ ರಕ್ಷಿಸಿದ ಘಟನೆ ಇಂದಿಗೂ ನನ್ನನ್ನು ರೋಮಾಂಚನ ಗೊಳಿಸುತ್ತದೆ, ಎಂದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ರಾಜ್ಯ ಪ್ರಶಸ್ತಿ, ಕೇರಳದ ನಾಲೆಜ್ ಸಿಟಿ ಯಲ್ಲಿ ಜೀವ ರಕ್ಷಕ ಪ್ರಶಸ್ತಿ, ಸಹಿತ ಅನೇಕ ಸಂಘ ಸಂಸ್ಥೆಗಳು ಮಹಮ್ಮದ್ ರ ಸೇವೆಯನ್ನು ಗುರುತಿಸಿ ಗೌರವಿಸಿದೆ.

ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರುಗಳಾದ ಅಮ್ರಾಜ್ ಕಂಕನಾಡಿ, ಅಮೀರ್ ಅಹಸನ್ ಬಿಜೈ, ಹಾರಿಸ್ ನೆಟ್ಟಣ, ಮುಸ್ತಫ ಬುಡೋಲಿ, ಸಿದ್ದೀಕ್ ಮೆಟ್ರೋ ಸುಳ್ಯ, ಶಹೀರ್ ಕಲ್ಲಾಜೆ, ಮತ್ತಿತರರು ಉಪಸ್ಥಿತರಿದ್ದರು

Related posts

ಕುಮ್ಕಿ ಜಮೀನಿನ ಹಕ್ಕನ್ನು ರೈತರಿಗೆ ನೀಡುವ ಕುರಿತಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಹರೀಶ್ ಪೂಂಜ

Suddi Udaya

ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ 35ನೇ ವರ್ಷದ ಮೊಸರು ಕುಡಿಕೆ ಉತ್ಸವದ ಗೌರವಾಧ್ಯಕ್ಷರಾಗಿ ಪದ್ಮನಾಭ ಸುವರ್ಣ ಬಳ್ಳಮಂಜ, ಅಧ್ಯಕ್ಷರಾಗಿ ಪ್ರಶಾಂತ್ ಎಂ. ಪಾರೆಂಕಿ ಆಯ್ಕೆ

Suddi Udaya

ನಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನೆಯ ಸದಸ್ಯೆ ಕು| ಅನುಕ್ಷಾರಿಗೆ ವಾಣಿ ಪ.ಪೂ. ಕಾಲೇಜು ವಾರ್ಷಿಕೋತ್ಸವದಲ್ಲಿ ಸನ್ಮಾನ

Suddi Udaya

ಮೈಪಾಲದಲ್ಲಿ ಭರದಿಂದ ಸಾಗುತ್ತಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ, ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ – ಕಾಮಗಾರಿ ವೀಕ್ಷಣೆ

Suddi Udaya

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya
error: Content is protected !!