April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ವೇಣೂರು : ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 29ರಂದು ಕುಕ್ಕೇಡಿಯಲ್ಲಿ ನಡೆದಿದೆ.

ಕುಕ್ಕೇಡಿ ಗ್ರಾಮದ ಗೋಳಿಯಂಗಡಿಬೊಳ್ಳಾಲು ಮನೆ ದಿ| ಅಣ್ಣಪ್ಪ ಮೂಲ್ಯರ ಪುತ್ರಿ ಶ್ರೀಮತಿ ಹರಿಣಾಕ್ಷಿ (35 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಶ್ರೀಮತಿ ಹರಿಣಾಕ್ಷಿ ಅವರನ್ನು ಸುಮಾರು 8 ವರ್ಷ ಹಿಂದೆ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ನಾಗೇಶ ಬಂಗೇರ ಎಂಬವರಿಗೆ ಜಾತಿ ಸಂಪ್ರದಾಯದಂತೆ ಮದುವೆ ಮಾಡಿ ಕೊಡಲಾಗಿತ್ತು. ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದ ಹರಿಣಾಕ್ಷಿಯವರು ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿ, ಸಂಪೂರ್ಣ ಗುಣಮುಖರಾಗಿ ರಲಿಲ್ಲ. ಸುಮಾರು ಮೂರುವರೇ ತಿಂಗಳ ಹಿಂದೆ ಎರಡನೇ ಹೆರಿಗೆಯಾಗಿ ತವರು ಮನೆಯಲ್ಲಿ ಇದ್ದವರು ಸುಮಾರು 20 ದಿನ ಗಳ ಹಿಂದೆ ತನ್ನ ತಾಯಿ ಶ್ರೀಮತಿ ಮೋನಮ್ಮ ರವರೊಂದಿಗೆ ಗಂಡನ ಮನೆಗೆ ಹೋಗಿದ್ದರು.

ಸೆ.28 ರಂದು ಮಾನಸಿಕ ಖಿನ್ನತೆಗೆ ಒಳಪಟ್ಟವಳನ್ನು ಗಂಡನ ಮನೆಯಿಂದ ಕುಕ್ಕೆಡಿಯ ತಾಯಿ ಮನೆಗೆ ಕರೆದುಕೊಂಡು ಬಂದಿದ್ದರು. 29 ರಂದು ಬೆಳಗಿನ ಜಾವ ಹರಿಣಾಕ್ಷಿಯವರು ಮಾನಸಿಕ ಖಿನ್ನತೆಯಿಂದ ಎದ್ದು ಹೋಗಿ ತೋಟದ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವೇಣೂರು ಪೊಲೀಸ್ ಠಾಣೆಗೆ ಮೃತರ ಸಹೋದರ ಧನಂಜಯ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Related posts

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೌಡಿ ಶೀಟರ್ ಗಳು ಹಾಗೂ ಇತರ ಅಪರಾಧ ಹಿನ್ನೆಲೆಯನ್ನು ಹೊಂದಿರುವ ಆರೋಪಿಗಳ ಮನೆಗೆ ಪೊಲೀಸ್ ಭೇಟಿ ಪರಿಶೀಲನೆ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

Suddi Udaya

ಗರ್ಡಾಡಿ ಯುವಕ ಮಂಡಲದ ಅಧ್ಯಕ್ಷರಾಗಿ ದಿನೇಶ್ ಬಂಗೇರ ಆಯ್ಕೆ

Suddi Udaya

ಓಡಿಲ್ನಾಳ ಸ.ಉ.ಪ್ರಾ‌. ಶಾಲಾ ವಾರ್ಷಿಕೋತ್ಸವ ‘ಸಾಂಸ್ಕ್ರತಿಕ ಸಿಂಚನ’

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮೂಡಬಿದ್ರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ನಾರಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

Suddi Udaya
error: Content is protected !!