ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರು ಸಂಘದ ಆಶ್ರಯದಲ್ಲಿ ಜಾಗತಿಕ ಔಷಧ ತಜ್ಞರ ದಿನದ ಆಚರಣೆಯು ಇಂದು ಉಜಿರೆಯ ಕಾಶಿಬೆಟ್ಟಿನ ಅರಳಿ ರಸ್ತೆಯಲ್ಲಿರುವ ರೋಟರಿ ಸೇವಾ ಭವನದಲ್ಲಿ ನಡೆಯಿತು.
ಸಹಾಯಕ ಔಷಧ ನಿಯಂತ್ರಕರಾದ ಉದಯ ಕಿಶೋರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡುವ ಕೆಲಸವನ್ನು ನಗು ನಗುತಾ ಮಾಡಿ ನೀವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇರಲಿ ಎಂದು ಹೇಳಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ , ಮಂಗಳೂರಿನ ಸಹಾಯಕ ಔಷಧ ನಿಯಂತ್ರಕರಾದ ಉದಯ ಕಿಶೋರ್, ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘ ಇದರ ಗೌರವ ಕಾರ್ಯದರ್ಶಿ ಎ.ಕೆ ಜೀವನ್ , ಹಿರಿಯ ನಿವೃತ್ತ ಸರಕಾರಿ ಫಾರ್ಮಸಿಸ್ಟ್ ಜನಾರ್ದನ ಮಂಗಳೂರು, ಸೌತ್ ಕೆನೆರಾ ಡಿಸ್ಟ್ರಿಕ್ಟ್ ಕೆಮಿಸ್ಡ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ನ ಅಧ್ಯಕ್ಷರಾದ ಸುಜಿತ್ ಭಿಡೆ, ಕಾರ್ಯದರ್ಶಿಗಳಾದ ಗುರುಚರಣ್ ರಾವ್, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಮಾಧವ ಗೌಡ, ಕೋಶಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.
ನಂತರ ಹಿರಿಯ ಫಾರ್ಮಸಿಸ್ಟ್ ಆಗಿರುವ ಬಿ.ಎಂ.ಮೆಡಿಕಲ್ಸ್ ನ ರಮಾನಂದ ಅವರನ್ನು ಹಾಗೂ ಹಿರಿಯ ಔಷಧಿ ವ್ಯಾಪಾರಿ ನಾರಾವಿಯ ಗಣೇಶ್ ಮೆಡಿಕಲ್ಸ್ ನ ರವಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ 50 ವರ್ಷದಿಂದ ವ್ಯಾಪಾರ ಮಾಡುತ್ತಿರುವ ಅಮರ್ ಡ್ರಗ್ ಹೌಸ್ ಮಾಲಕರಾದ ಗಣಪತಿ ಭಟ್, ಹಾಗೂ ಧರ್ಮಸ್ಥಳದ ಅನ್ನ ಪೂರ್ಣ ಮೆಡಿಕಲ್ಸ್ ನ ರಜತ್ ರಾವ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಆರು ವರ್ಷಗಳಿಂದ ತನ್ನ ಔಷಧ ವ್ಯಾಪಾರದ ಜೊತೆಗೆ ಆನಾರೋಗ್ಯ ಪೀಡಿತರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವ ಉಜಿರೆಯ ಎಸ್ ಎ ಮೆಡಿಕಲ್ಸ್ ನ ಮಾಲಕರಾದ ಪ್ರಕಾಶ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ತಾಲೂಕಿನ 10 ಜನ ದೈಹಿಕ ಅಶಕ್ತರನ್ನು ಗುರುತಿಸಿ ಅವರಿಗೆ ಧನಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಗೆ ಸಂಘದ ವತಿಯಿಂದ ಆಂಟಿ ರೇಬೀಸ್ ಲಸಿಕೆಗಳನ್ನು ಹಸ್ತಾಂತರಿಸಲಾಯಿತು. ನಿಕಟ ಪೂರ್ವ ಅಧ್ಯಕ್ಷ ಎಂ ಚಂದ್ರಶೇಖರ ಹಾಗೂ ನಿಕಟ ಪೂರ್ವ ಕಾರ್ಯದರ್ಶಿ ರಘುನಾಥ ದಾಮ್ಲೆ ಅವರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರಿಗೆ ಔಷದೀಯ ಸಸ್ಯಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮವು ಸನ್ನಿಧಿ ಮೆಡಿಕಲ್ಸ್ ನ ಶ್ರೀಮತಿ ಅಶ್ವಿನಿಯವರ ಪ್ರಾರ್ಥಿಸಿ, ಸುಜಿತ್ ಭಿಡೆಯವರು ಸ್ವಾಗತಿಸಿದರು .ಕು.ಬಿಂದಿಯಾ ಕಾರ್ಯಕ್ರಮವನ್ನು ನಿರೂಪಿಸಿ, ಉದಯ ಕುಮಾರ ಜೈನ್ ವಂದಿಸಿದರು.