ಅರಸಿನಮಕ್ಕಿ : ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ, ಗ್ರಾಮ ಸ್ವರಾಜ್ಯಕ್ಕೆ ವಿಶೇಷ ಆದ್ಯತೆ ನೀಡಿದ್ದರು. ಶುಚಿತ್ವವೆಂಬುದು ಪ್ರತಿ ಮನೆಯಿಂದಲೆ ಆರಂಭವಾಗಬೇಕು. ಆಗ ಊರು, ಗ್ರಾಮ, ದೇಶ ಹೀಗೆ ಎಲ್ಲೆಡೆ ಸ್ವಚ್ಛತೆ ತನ್ನಿಂತಾನೆ ಸಾಧ್ಯವಾಗಲಿದೆ ಎಂದು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಹೇಳಿದರು.
ಅರಸಿನಮಕ್ಕಿ ಗ್ರಾ.ಪಂ. ವತಿಯಿಂದ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷರಾದ ಗಾಯತ್ರಿ ನಾಳಾಲು ಮಾತನಾಡಿ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸಂಘ-ಸಂಸ್ಥೆಗಳು, ಸಾರ್ವಜನಿಕರನ್ನು ಅಭಿನಂದಿಸಿದರು.
ಪಂ. ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಮಾತನಾಡಿ ಸ್ವಚ್ಛತೆಯೆಂಬುದು ಒಂದು ದಿನಕ್ಕೆ ಸೀಮಿತವಾಗಬಾರದು. ಅರಸಿನಮಕ್ಕಿಯಲ್ಲಿ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯನ್ನು ಮಾಡಲು ಶ್ರಮಿಸುತ್ತಿರುವುದಾಗಿ ತಿಳಿಸಿದರು. ಗ್ರಾ.ಪಂ. ಸದಸ್ಯರುಗಳಾದ ಪ್ರೇಮಚಂದ್ರ ಕೆ., ಲಾವಣ್ಯ, ಜನಾರ್ದನ ದೇವಸ, ಶಕುಂತಳಾ ಆಚಾರ್ಯ, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ರಾಮಯ್ಯ ಶೆಟ್ಟಿ, ಹತ್ಯಡ್ಕ ಮತ್ತು ರೆಖ್ಯ ಗ್ರಾಮದ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಎನ್‌ಎರ್‌ಎಲ್‌ಎಮ್ ಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬನಪ್ಪ ಗೌಡ್ರ ವಂದಿಸಿದರು. ಇದಕ್ಕೂ ಮೊದಲು ಅರಸಿನಮಕ್ಕಿ ಪೇಟೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.