24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಬೆಳ್ತಂಗಡಿ ತಾಲೂಕು ಓಡೀಲು ಭಜನಾ ಸಮಿತಿಯಿಂದ ತುಮಕೂರು ಹಾಗೂ ಶಿರಾ ತಾಲೂಕಿನಲ್ಲಿ ಶ್ರೀ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಅದ್ಭುತ ಕುಣಿತ ಭಜನಾ ಸೇವೆ

ಬೆಳ್ತಂಗಡಿ: ತುಮಕೂರಿನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇದರ ಅದ್ದೂರಿ ಗಣೇಶೋತ್ಸವದ ವಿಸರ್ಜನ ಮಹೋತ್ಸವ ಮತ್ತು ತಂಡದ ಎಲ್ಲ ಸದಸ್ಯರು ತರಬೇತಿದಾರಾದ ಸಂದೇಶ್ ಮದ್ದಡ್ಕ ಇವರ ಮಾರ್ಗದರ್ಶನದಂತೆ ಅದ್ಭುತವಾದ ಕುಣಿತ ಭಜನಾ ಪ್ರದರ್ಶನವನ್ನು ನೀಡಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿರುತ್ತಾರೆ.

ಸಂದೇಶ್ ಮದ್ದಡ್ಕ ಇವರ ವಿಧ್ಯಾರ್ಥಿಗಳ ತಂಡ ಶಿರಾ ದುರ್ಗಾಂಬ ಭಜನಾ ಮಂಡಳಿಯ ಸದಸ್ಯರು ಹಾಗೂ ಓಡೀಲು ಮಹಾಲಿಂಗೇಶ್ವರ ಭಜನಾ ಮಂಡಳಿ, ರಾಮಾಂಜನೇಯ ಭಜನಾ ಮಂಡಳಿ ಪುಂಜಾಲಕಟ್ಟೆ, ರುದ್ರಗಿರಿ ಭಜನಾ ಮಂಡಳಿ ತಣ್ಣೀರುಪಂತ, ಶ್ರೀ ವ್ಯಾಘ್ರ ಚಾಮುಂಡಿ ಕರಿಯಬೆ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಾಲಾಡಿ, ಶ್ರೀ ಗೋಪಾಲ ಕೃಷ್ಣ ಭಜನಾ ಮಂಡಳಿ ನಾವುರು, ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಂದ್ಕೂರು ಮತ್ತು ಶ್ರೀ ಭ್ರಾಮರಿ ಭಜನಾ ಮಂಡಳಿ ಗುರುವಾಯನಕೆರೆಯ ಸದಸ್ಯರು ತುಮಕೂರು ನಗರದಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ.

ತುಮಕೂರು ಸಿದ್ದಗಂಗಾ ಮಠದಲ್ಲಿ ಭಜನಾ ಕಾರ್ಯಕ್ರಮವನ್ನು ನೀಡಿ ಶಿರಾ ತಾಲೂಕಿನ ಹಿಂದೂ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿತ ಭಜನೆಯನ್ನು‌ನೀಡಿ ಸುಮಾರು 50,000 ಅಧಿಕ ಭಕ್ತರ ಮನಸ್ಸನ್ನು ಗೆದ್ದಿರುತ್ತಾರೆ. ಹೊರ ಜಿಲ್ಲೆಯಲ್ಲಿ ಭಜನೆಯ ಕ್ರಾಂತಿಯನ್ನು ಮೂಡಿಸಿದ್ದಾರೆ.

ಕಾರ್ಯಕ್ರಮವನ್ನು ನೀಡಲು ಅವಕಾಶ ಮಾಡಿಕೊಟ್ಟ ತುಮಕೂರು ಜಿಲ್ಲೆಯ ಶಿರಾ 2 ಜಿಲ್ಲಾ ಗ್ರಾಮಾಭಿವೃದ್ದಿ ಯೋಜನಾ ಕಚೇರಿಯ ನಿರ್ದೇಶಕರಾದ ದಿನೇಶ್ ಪೂಜಾರಿ ಹಾಗೂ ಕುಣಿತ ಭಜನಾ ತಂಡದ ತರವೇತುದಾರರಾದ ಸಂದೇಶ್ ಮದ್ದಡ್ಕ ಇವರು ಸಹಕರಿಸಿದರು.

Related posts

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಮುಂಡಾಜೆ ಗ್ರಾ.ಪಂ. ನಲ್ಲಿ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಮಹಾ ಅಭಿಯಾನ

Suddi Udaya

ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಶರೀಫ್ ಮೂಸ ಕುಂಞ ಮೃತ್ಯು

Suddi Udaya

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು: ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಪುನೀತ್ ನಾಪತ್ತೆ, ಮುಂದುವರಿದ ಶೋಧಕಾರ್ಯ

Suddi Udaya

ಎಂಡೋಸಲ್ಫಾನ್ ವಿರುದ್ಧ ಹೋರಾಟಗಾರರಾದ ಕೊಕ್ಕಡದ ಶ್ರೀಧರ ಗೌಡ ಕೆಂಗುಡೇಲುರವರಿಗೆ “ವಿಕ ಹಿರೋಸ್” ಪ್ರಶಸ್ತಿ

Suddi Udaya
error: Content is protected !!