September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆಸರ್ಕಾರಿ ಇಲಾಖಾ ಸುದ್ದಿ

ಅ. 6 -7: ಮೂಡಬಿದ್ರೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿ ಯುವಕ- ಯುವತಿಯರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಎಂದು ಶಾಸಕ ಹರೀಶ್ ಪೂಂಜರವರು ಹೇಳಿದರು.

ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 204 ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು, ಮೇಳದಲ್ಲಿ ಭಾಗವಹಿಸುವ ಸಾವಿರಾರು‌ ಮಂದಿಗೆ ಉದ್ಯೋಗ ದೊರೆಯಲಿದೆ. ಬೆಳ್ತಂಗಡಿಯ ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿ ಯುವಕ- ಯುವತಿಯರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು.

ಪದವಿ ಶಿಕ್ಷಣ, ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್ ಹಾಗೂ ಇನ್ನಿತರ ಪಧವೀದರರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅವರು ತಿಳಿಸಿದರು .

ಈ ಸಂದರ್ಭದಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ವಿಶೇಷವಾಗಿ ಅಕ್ಟೋಬರ್ 6 ರಂದು ಬೆಳಿಗ್ಗೆ 7ಗಂಟೆಗೆ ಸರಿಯಾಗಿ ಆಳ್ವಾಸ್ ನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಶ್ರಮಿಕ ಕಚೇರಿಯ ಬಳಿಯಿಂದ ಉಚಿತ ಬಸ್ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶ್ರಮಿಕ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಮೊ:9901212207

Related posts

ಅತ್ಯಮೂಲ್ಯ ಮತ ಚಲಾಯಿಸಿದ 106 ವರ್ಷದ ಅಜ್ಜಿ:

Suddi Udaya

ಸವಣಾಲು ಅ. ಹಿ. ಪ್ರಾ. ಶಾಲೆಯ ನಡ್ತಿಕಲ್ಲುವಿನಲ್ಲಿ ಹಣ್ಣಿನ ಗಿಡನಾಟಿ

Suddi Udaya

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ-ನಿಟ್ಟಡೆ ಸಂಘಟನೆ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Suddi Udaya

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮುಖ್ಯ ಕಾರ್ಯಾಚರಣಾ ಅಧಿಕಾರಿ ರುಡ್ ಸೆಟ್ ಸಂಸ್ಥೆಗೆ ಭೇಟಿ

Suddi Udaya

ಕಳೆಂಜ: ಮಣಿಗೇರಿ, ಕುಲಾಡಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ಅಂತಿಮ

Suddi Udaya

ವೇಣೂರಿನ ನವಚೇತನ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟ: ಶರ್ವಿನ್ ಮೋನಿಸ್, ಸಾನ್ವಿ ಎಂ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!