30 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.14-16: ಉಜಿರೆಯಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಉಜಿರೆ: ಉಜಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಶಾರದಾ ಮಂಟಪದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14ರಿಂದ 16ರವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೆ.14ರಂದು ಬೆಳಿಗ್ಗೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಗಣಪತಿ ಹವನ, ಶ್ರೀ ಗಣಪತಿ ಮೂರ್ತಿ ಪ್ರತಿಷ್ಠೆ ನಡೆಯಲಿದೆ. ಈ ಸಂದರ್ಭದಲ್ಲಿ ಉಜಿರೆಯ ಸಂಪತ್ ರತ್ನ ರಾವ್ ಮತ್ತು ಶಿವಶಂಕರ ಕುಡ್ವ ಉಪಸ್ಥಿತರಿರುವರು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ಭಕ್ತಿಗೀತೆ ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಂಗವಲ್ಲಿ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ.

ಸೆ.15ರಂದು ಬೆಳಿಗ್ಗೆ ಗಣಪತಿ ಹವನ, ವಿವಿಧ ಭಜನಾ ತಂಡಗಳಿAದ ಭಜನಾ ಕಾರ್ಯಕ್ರಮ, ಉಪ್ಪಿನಂಗಡಿಯ ಸ್ಕಂದ ಮ್ಯೂಸಿಕಲ್ ತಂಡದಿAದ ಭಕ್ತಿಗೀತೆ, ರಸಮಂಜರಿ ಹಾಗೂ ರಾತ್ರಿ ಆಯ್ದ ನೃತ್ಯ ತಂಡಗಳಿAದ “ನೃತ್ಯ ಝೇಂಕಾರ” ನೃತ್ಯ ಕಾರ್ಯಕ್ರಮ ನಡೆಯಲಿದೆ.

ಸೆ.16ರಂದು ಬೆಳಿಗ್ಗೆ ೧೦೮ ತೆಂಗಿನಕಾಯಿ ಗಣಪತಿ ಹವನ ಹಾಗೂ ಪೂರ್ಣಾಹುತಿ, ಅಪರಾಹ್ನ ಸಂತೋಷ್ ಆಚಾರ್ಯ ಅತ್ತಾಜೆ ಅವರಿಂದ ಭಕ್ತಿನಾದ ಜಾನಪದ ಗಾಯನ ಹಾಗೂ ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರ ಗೌರವ ಉಪಸ್ಥಿತಿ, ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ನಡೆಯಲಿದೆ.


ಸಂಜೆ ಆಕರ್ಷಕ ಸ್ಥಬ್ಧ ಚಿತ್ರಗಳು, ಸುಡುಮದ್ದು ಪ್ರದರ್ಶನ ಹಾಗೂ ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ನಗರದಲ್ಲಿ ಸಾಗಿಬಂದು ದೇವಸ್ಥಾನದ ಪುಷ್ಕರಣಿ ಕೆರೆಯಲ್ಲಿ ವಿಸರ್ಜಿಸಲ್ಪಡಲಿದೆ.

Related posts

ಭಾರೀ ಗಾಳಿ ಮಳೆ: ಪಡಂಗಡಿ ವ್ಯಾಪ್ತಿಯಲ್ಲಿ ಮನೆ ಮೇಲೆ ಹಾಗೂ ರಸ್ತೆಗೆ ಬಿದ್ದ ಮರ : ಅಪಾರ ಹಾನಿ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ :

Suddi Udaya

ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಡೇವಿಡ್ ಜೈಮಿ ಕೊಕ್ಕಡ ರಿಗೆ ಸನ್ಮಾನ

Suddi Udaya

ಹೈನುಗಾರಿಕೆಯ ಸಾಧಕ ಪಿ.ನಾರಾಯಣ ರಾವ್ ಧರ್ಮಸ್ಥಳ ವಿಧಿವಶ

Suddi Udaya

ಮುಂಬೈಯಲ್ಲಿ ನಡೆದ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಗರ್ಡಾಡಿಯ ರಕ್ಷಿತ್ ಪೈ ದ್ವಿತೀಯ ಸ್ಥಾನ

Suddi Udaya
error: Content is protected !!