April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಡಿ.ಪಿ.ಐ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

ಗುರುವಾಯನಕೆರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ಸುನ್ನತ್ ಕೆರೆ – ಪೊಟ್ಟುಕೆರೆ (ಶಕ್ತಿ ನಗರ) ಸಂಪರ್ಕ ರಸ್ತೆ ದುರಸ್ಥಿಗೆ ಆಗ್ರಹಿಸಿ ಸುನ್ನತ್ ಕೆರೆ ಹನಫಿ ಮಸೀದಿ ಬಳಿಯಿಂದ ಕಾಲ್ನಡಿಗೆ ಜಾಥಾ ನಡೆಸಿ ನಂತರ ಸುನ್ನತ್ ಕೆರೆ ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆಯು ಅ. 6 ರಂದು ನಡೆಯಿತು.

ಹಲವಾರು ವರ್ಷಗಳಿಂದ ಈ ಸಂಪರ್ಕ ರಸ್ತೆಯು ಹದೆಗೆಟ್ಟು ದುರಸ್ಥಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಂಬಂಧಪಟ್ಟ ವಿವಿಧ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ರಸ್ತೆ ಸರಿ ಪಡಿಸುವಂತೆ ಹಲವು ಭಾರೀ ಮನವಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ನವಾಝ್ ಕಟ್ಟೆ ಮಾತನಾಡಿ ಇಷ್ಟು ದಿನ ನಮ್ಮ ಮನವಿಗಳನ್ನು ನಿರ್ಲಕ್ಷಿಸಿ ರಸ್ತೆ ದುರಸ್ಥಿ ಮಾಡದೆ ಇರುವುದರಿಂದ ಇಂದು ಸಾಂಕೇತಿಕವಾಗಿ ಈ ಪ್ರತಿಭಟನೆ ನಡೆಸುತ್ತಾ ಇದ್ದೇವೆ ಮತ್ತು 2 ತಿಂಗಳ ಒಳಗಾಗಿ ಈ ರಸ್ತೆಯನ್ನು ದುರಸ್ಥಿ ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನು ಸೇರಿಸಿ ಮತ್ತಷ್ಟು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುದು ಎಂದು ಎಚ್ಚರಿಸಿದರು.

ಕುವೆಟ್ಟು ಬ್ಲಾಕ್ ಅಧ್ಯಕ್ಷ ಅಬ್ದುಲ್ ರವೂಫ್ ಪುಂಜಾಲಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಟನೆಯಲ್ಲಿ SDPI ಬೆಳ್ತಂಗಡಿ ವಿಧಾನಸಭಾ ಪಕ್ಷ ಸಂಘಟನಾ ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫಾ ಜಿ.ಕೆ, ಶಮೀಮ್ ಸುನ್ನತ್ ಕೆರೆ, ರಿಯಾಝ್ ಮದ್ದಡ್ಕ, ಹಾಗೂ SDPI ಬೂತ್ ಅಧ್ಯಕ್ಷ ಅಶ್ರಫ್ ಸುನ್ನತ್ ಕೆರೆ ಮತ್ರು ಗ್ರಾಮ ಸಮಿತಿ ಅಧ್ಯಕ್ಷ ದಾವೂದ್ ಉಪಸ್ಥಿತರಿದ್ದರು.

ಕುವೆಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿಯವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಸ್ವಾಲಿ ಮದ್ದಡ್ಕ ಸ್ವಾಗತಿಸಿ ಅಸ್ಲಂ ಮದ್ದಡ್ಕ ನಿರೂಪಿಸಿ ಧನ್ಯವಾದಗೈದರು.

Related posts

ಭಾರತೀಯ ಜನತಾ ಪಾರ್ಟಿಯ ನಾವೂರು ಶಕ್ತಿ ಕೇಂದ್ರದ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya

ಉಪ ವಲಯ ಅರಣ್ಯಾಧಿಕಾರಿ ಉಜಿರೆಯ ಕಮಲಾ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ “ ಸ್ವಚ್ಛ ಭಾರತ ದಿನ ” ವಿಶೇಷ ಗ್ರಾಮ ಸಭೆ

Suddi Udaya

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ರಸ್ತೆ ಬದಿ ಹಣ್ಣಿನ ಗಿಡ ನಾಟಿ, ನೆಟ್ಟ ಗಿಡಗಳ ಪುನಶ್ಚೇತನ ಮತ್ತು ಇಂಗು ಗುಂಡಿ ರಚನಾ ಕಾರ್ಯಕ್ರಮ

Suddi Udaya

ಹೊಸ್ಮಾರು ಸಿದ್ಧರವನ ಕ್ಷೇತ್ರದಲ್ಲಿ ಪೂಜ್ಯ ಮುಕ್ತಿಮತಿ ಮಾತಾಜಿ ಚಾತುರ್ಮಾಸ್ಯ

Suddi Udaya

ಉಜಿರೆಯ ಕುಂಜರ್ಪದಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಸೌಜನ್ಯ ಟ್ರೋಫಿ -2024

Suddi Udaya
error: Content is protected !!