September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್ ಡಿ.ಎಂ.ಕಾಲೇಜು ಎನ್.ಎಸ್.ಎಸ್. ಘಟಕಕ್ಕೆ ರಾಜ್ಯ ಪ್ರಶಸ್ತಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾರ್ಯಕ್ರಮಾಧಿಕಾರಿ ಡಾ. ಲಕ್ಷ್ಮೀನಾರಾಯಣ ಕೆ. ಎಸ್.  ಅವರಿಗೆ ಎನ್ನೆಸ್ಸೆಸ್ ರಾಜ್ಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ರಾಜ್ಯಪಾಲರ ರಾಜಭವನದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಿ.ಎ.ಕುಮಾರ್ ಹೆಗ್ಡೆ ಹಾಗೂ  ಎನ್ .ಎಸ್ ಎಸ್ ಅಧಿಕಾರಿ .ಲಕ್ಷ್ಮೀನಾರಾಯಣ್ ಕೆ ಎಸ್.  ಅವರು ಪ್ರಶಸ್ತಿ ಸ್ವೀಕರಿಸಿದರು.


ಡಾ.ಲಕ್ಷ್ಮೀನಾರಾಯಣ್ ಅವರು ಜೂನ್ 2019ರಿಂದ ಜೂನ್ 2023 ರವರೆಗೆ ಯೋಜನಾಧಿಕಾರಿಯಾಗಿ ಎನ್ನೆಸ್ಸೆಸ್ ಘಟಕವನ್ನು ಮುನ್ನಡೆ ಸಿದ್ದರು. ಈ ಅವಧಿಯಲ್ಲಿ ಮೂರು ವಾರ್ಷಿಕ ವಿಶೇಷ ಶಿಬಿರಗಳ ಆಯೋಜನೆ, ಕೊರೊನಾ ಕಾಲದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಜಾಗೃತಿ, ಲಾಕ್ ಡೌನ್ ವಿಶೇಷ ಕಾರ್ಯಕ್ರಮಗಳು,  ಕೋವಿಡ್ ಲಸಿಕಾ ಜಾಗೃತಿ ಹಾಗೂ ಲಸಿಕಾ ಶಿಬಿರಗಳ ಆಯೋಜನೆ, ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸ್ವಯಂಸೇವಕರೇ ಸಂಪನ್ಮೂಲ ವ್ಯಕ್ತಿಗಳಾಗಿ ಸ್ವತಂತ್ರ ಭಾರತದ ಸಾಧಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ 75 ವಿಶೇಷ ಉಪನ್ಯಾಸಗಳ ಸರಣಿ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು ಅ ಲ್ಲದೆ ಇಂಗು ಗುಂಡಿಗಳ ನಿರ್ಮಾಣ, ಸ್ವಚ್ಛ ಭಾರತ ಕಾರ್ಯಕ್ರಮಗಳ ಆಯೋಜನೆ,ಪರಿಸರ ಸಂರಕ್ಷಣೆ ಸಂಬಂಧಿ‌ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳು, ಆರೋಗ್ಯ ಶಿಬಿರಗಳು, ಗದ್ದೆ ನಾಟಿ,ಚಾರ್ಮಾಡಿ ಯಲ್ಲಿ ಪ್ರವಾಹದ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ಭಾಗಿ, ಜಲಸಂರಕ್ಷಣೆ ಜಾಗೃತಿ ಜಾಥಾಗಳು,  ಮಾದಕ ವ್ಯಸನಿ ವಿರೋಧಿ ಕಾರ್ಯಕ್ರಮಗಳು, ಸಾಮಾಜಿಕ ಪ್ರಜ್ಞೆ ಜಾಗ್ರತಿ ಕಾರ್ಯಕ್ರಮಗಳು  ಹಾಗೂ ಜಲ ಸಂರಕ್ಷಣೆ ಕುರಿತಾದ ಕಾರ್ಯಕ್ರಮಗಳ ಆಯೋಜನೆ, ಗಣರಾಜ್ಯೋತ್ಸವ ಪೆರೇಡ್ ನಲ್ಲಿ, ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ  ಶಿಬಿರಗಳಲ್ಲಿ, ಯುವಜನೋತ್ಸವಗಳಲ್ಲಿ, ನಾಯಕತ್ವ ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.

ಕಾಲೇಜಿನ ಎನ್ನೆಸ್ಸೆಸ್ ಘಟಕಕ್ಕೆ ಈವರೆಗೆ 10 ಬಾರಿ, ಕಾರ್ಯಕ್ರಮ ಅಧಿಕಾರಿಗಳಿಗೆ 10 ಬಾರಿ ಹಾಗೂ ವಿದ್ಯಾರ್ಥಿಗಳಿಗೆ 6 ಬಾರಿ ರಾಜ್ಯ ಪ್ರಶಸ್ತಿ ಬಂದಿದೆ.
ಒಂದು ಬಾರಿ ಇಂದಿರಾ ಗಾಂಧಿ ಎನ್ನೆಸ್ಸೆಸ್  ರಾಷ್ಟ್ರ ಪ್ರಶಸ್ತಿಯು ಲಭಿಸಿದ್ದು ಪ್ರಸ್ತುತ ಪ್ರಿನ್ಸಿಪಾಲ್ ಆಗಿರುವ ಡಾ. ಕುಮಾರ್ ಹೆಗ್ಡೆ ಅವರಿಗೆ  ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿತ್ತು.

Related posts

ಪುತ್ತೂರು: ಹಿಂದೂ ಕಾರ್ಯಕರ್ತರಿಗೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ ಪ್ರಕರಣ: ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜ

Suddi Udaya

ಅಗತ್ಯ ಬಿದ್ದರೆ ಸಂತ್ರಸ್ಥರ ನೆರವಿಗೆ ವಯನಾಡ್ ಗೆ ತೆರಳಲು ಸಿದ್ಧರಿದ್ದೇವೆ : ಸಮಾಜ ಸೇವಕ ಡಾ. ರವಿ ಕಕ್ಕೆಪದವು

Suddi Udaya

ಅಡಿಕೆ ಎಲೆಚುಕ್ಕಿ ರೋಗ: ರೈತರಿಗೆ ಸಹಾಯಧನ ನೀಡಲು ಶಿಫಾರಸ್ಸು ಅರ್ಜಿ ಸಲ್ಲಿಕೆಗೆ ಸೂಚನೆ

Suddi Udaya

ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್‌ನಲ್ಲಿ ಬಕ್ರೀದ್ ಆಚರಣೆ

Suddi Udaya

ಮಂಗಳೂರುನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗಾಗಿ ವಕೀಲರ ಸಂಘದಿಂದ ಸಮಾಲೋಚನಾ ಸಭೆ: ಮಂಗಳೂರಿನಲ್ಲಿ ನಮಗೆ ಬೇಕು ಹೈಕೋರ್ಟ್ ಪೀಠ: ಧನಂಜಯ್ ರಾವ್

Suddi Udaya

ಶಾಸಕ ಹರೀಶ್ ಪೂಂಜ ಹಾಗೂ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ‘ದಸ್ಕತ್’ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

Suddi Udaya
error: Content is protected !!