30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಂಕಕಾರಂದೂರು: ವೃತ್ತಿಯಿಂದ ನಿವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಶಾಂತಿಯವರಿಗೆ ಬೀಳ್ಕೊಡುಗೆ ಸಮಾರಂಭ

ತೆಂಕಕಾರಂದೂರು: ಅಂಗನವಾಡಿ ಕೇಂದ್ರದಲ್ಲಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶ್ರೀಮತಿ ಶಾಂತಿ ಇವರಿಗೆ ತೆಂಕಕಾರಂದೂರು ಗ್ರಾಮಸ್ಥರ ಪರವಾಗಿ ಬಿಳ್ಕೋಡುಗೆ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಂಜ ಗ್ರಾಮ ಪಂಚಾಯತ್ ಸದಸ್ಯ ನಿಜಾಮ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಕೆ ವಸಂತ ಸಾಲಿಯಾನ್, ಬಳಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಅಳದಂಗಡಿ ಪ್ರಾ. ಕೃ. ಪ. ಸಂಘ ದ ನಿರ್ದೇಶಕರಾದ ಜಿನ್ನಪ್ಪ ಪೂಜಾರಿ ಕಾಪಿನಡ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಗುಲಾಬಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಲೀಲಾವತಿ, ಶ್ರೀಮತಿ ಪ್ರಸನ್ನ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಾಂತಿ ವಹಿಸಿದ್ದರು.

ಈ ಸಂದರ್ಭದಲ್ಲಿ ಗಾಂಧಿ ಗ್ರಾಮ ಪುರಸ್ಕೃತ ಬಳಂಜ ಗ್ರಾಮ ಪಂಚಾಯತ್ ನ ಪರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ರವನ್ನು ಸನ್ಮಾನಿಸಲಾಯಿತು.ನಿವೃತ್ತ ಅಂಚೆ ಪಾಲಕ ನಾರಾಯಣ ಗೌಡ ರವರು ಅನಿಸಿಕೆ ವ್ಯಕ್ತ ಪಡಿಸಿದರು,ಸ್ವಾಗತ್ ಫ್ರೆಂಡ್ಸ್ ನ ಮುಂದಾಳು ಮುಸ್ತಫ ಮಂಜೊಟ್ಟಿ, ಬಾಲ ವಿಕಾಸ ಸಮಿತಿ ಸರ್ವ ಸದಸ್ಯರು, ತೆಂಕಕಾರಂದರು ಸ್ತ್ರೀ ಶಕ್ತಿ ಸಂಘದ ಸದಸ್ಯರು,ಮಕ್ಕಳ ಪೋಷಕರು, ಊರಿನ ಸಮಸ್ತ ಜನರು, ಅಂಗನವಾಡಿ ಕೇಂದ್ರ ದ ಸಹಾಯಕಿ ಶ್ರೀಮತಿ ಲಿಲ್ಲಿ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು, ನಿವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಾಂತಿ ಇವರು ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ ಯನ್ನು ಉಡುಗೊರೆಯಾಗಿ ಕೊಡುಗೆ ನೀಡಿದರು. ಕಾರ್ಯಕ್ರಮವನ್ನು ಕಾಪಿನಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಸುಂದರಾ ನಿರೂಪಿಸಿ, ತೆಂಕಕಾರಂದೂರು ಅಂಗನವಾಡಿ ಕಾರ್ಯ ಕರ್ತೆ ಶ್ರೀಮತಿ ಸ್ಫೂರ್ತಿ. ಎಸ್. ಸ್ವಾಗತಿಸಿ ಧನ್ಯವಾದವಿತ್ತರು.

Related posts

ಕಲ್ಮಂಜ: ನಿಡಿಗಲ್ ಆದರ್ಶನಗರದ ನಿವಾಸಿ ಚಂದ್ರಶೇಖರ್ ಎಮ್. ನಿಧನ

Suddi Udaya

ಬೆಳ್ತಂಗಡಿ: ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜನಾ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಗೌಡ ಆಯ್ಕೆ

Suddi Udaya

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

Suddi Udaya

ಕುಪ್ಪೆಟ್ಟಿ ಸ.ಉ.ಪ್ರಾ.ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya

ಉಜಿರೆ:ಎಸ್ ಡಿ ಎಮ್ ನಲ್ಲಿ ನೆನಪಿನಂಗಳ ಕಾರ್ಯಕ್ರಮ

Suddi Udaya

ಕುಣಿತಾ ಭಜನೆಯೊಂದಿಗೆ ಹುಟ್ಟು ಹಬ್ಬ ಆಚರಣೆ

Suddi Udaya
error: Content is protected !!