April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಸ್ಪಂದನರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ನಟ ವಿಜಯರಾಘವೇಂದ್ರ ಕುಟುಂಬಸ್ಥರು ಭಾಗಿ

ಬೆಳ್ತಂಗಡಿ: ತುಳುನಾಡ ಸಂಸ್ಕೃತಿಯಂತೆ ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಅ.13ರಂದು ಸಾಯಂಕಾಲ ನಟ ವಿಜಯರಾಘವೇಂದ್ರರವರ ಧರ್ಮಪತ್ನಿ ಸ್ಪಂದನ ರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ಜರಗಿತು.


ಈ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ, ಶೌರ್ಯ ವಿಜಯ ರಾಘವೇಂದ್ರ, ಬಿಕೆ ಶಿವರಾಂ ಕುಟುಂಬಸ್ಥರು ಸುಪ್ರಸಿದ್ಧ ಸಿನೆಮಾ ನಿರ್ಮಾಪಕರಾದ ಸಿ.ಎಸ್.ಎ ಚಿನ್ನೆ ಗೌಡ, ಸ್ಪಂದನ ಅವರ ಸಹೋದರ ರಕ್ಷಿತ್ ಶಿವರಾಂ, ರಾಜು ಪೂಜಾರಿ ಕಾಶಿಪಟ್ನ, ನ್ಯಾಯವಾದಿ ಭಗೀರಥ ಜಿ. ಯೋಗೀಶ್ ಕುಮಾರ್ ನಡಕರ, ಗಂಗಾಧರ ಮಿತ್ತಮಾರು, ಸತೀಶ್ ಬಂಗೇರ ಕಾಶಿಪಟ್ನ, ನಾಗೇಶ್ ಗೌಡ, ಡಾ. ರಾಜಾರಾಮ್, ಸುಭಾಷ್ ರೈ, ರಮೇಶ ಬಂಗೇರ, ಪ್ರವೀಣ್ ಫೆರ್ನಾಂಡಿಸ್, ಜಯವಿಕ್ರಂ ಕಲ್ಲಾಪು, ತುಕಾರಾಮ ಬಂಗೇರ, ಚಂದ್ರಶೇಖರ ಪೂಜಾರಿ, ಜಗನ್ನಾಥ್ ಬಂಗೇರ, ಹೆರಾಜೆ ಕುಟುಂಬದ ಪೀತಾಂಬರ ಹೆರಾಜೆ, ಮಿತ್ರ ಹೆರಾಜೆ ಹಾಗೂ ನೂರಾರು ಕುಟುಂಬಸ್ಥರು ಹಾಗೂ ತಾಲೂಕಿನ ಗಣ್ಯರು ಹಾಜರಿದ್ದರು. ಶೇಖರ ಬಂಗೇರರವರ ನೇತೃತ್ವದಲ್ಲಿ, ಪ್ರಶಾಂತ್ ಕಾಂಡೆತ್ಯಾರು, ದಿನೇಶ್‌ರವರ ಸಹಕಾರದೊಂದಿಗೆ ಪೂಜಾ, ವಿಧಿ-ವಿಧಾನಗಳನ್ನು ನಡೆಸಲಾಯಿತು. ವರುಣದೇವರ ಕೃಪೆಯಿಂದ ಮಳೆಯ ಅವಾಂತರವಿಲ್ಲದೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

Related posts

ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಯ ವಯರ್ ನಲ್ಲಿ‌ ರಾತ್ರಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಭಾರೀ ಅನಾಹುತ

Suddi Udaya

ವಾಲಿಬಾಲ್ ಪಂದ್ಯಾಟ: ವಾಣಿ ಆಂ.ಮಾ. ಪ್ರೌಢ ಶಾಲೆ ಹುಡುಗರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

Suddi Udaya

ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಪ್ರಕ್ರಿಯೆಗೆ ಇಲಾಖೆಯಿಂದ ಕ್ರಮ: ತಾಲೂಕಿನಲ್ಲಿ 7,024 ಬಿಪಿಎಲ್ ಪಡಿತರ ಚೀಟಿಗಳ ಪರಿಶೀಲನೆ: 53 ಕುಟುಂಬಗಳ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಲಾಯಿಲ : ಹಳೇಪೇಟೆ ಶ್ರೀ ಸರಸ್ವತಿ ಭಜನಾ ಮಂಡಳಿಯ ನೂತನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!