ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೊ ಅಧಿಕೃತ ಭೇಟಿ: ಸುವರ್ಣ ಸಂಭ್ರಮದ ಬೆಳ್ತಂಗಡಿ ಲಯನ್ಸ್ ಸ್ಪೂರ್ತಿಯಿಂದ ಸೇವೆಗೈಯ್ಯುತ್ತಿದೆ-ಹೆರಾಲ್ಡ್ ತಾವ್ರೋ

Suddi Udaya

ಬೆಳ್ತಂಗಡಿ; ಸುವರ್ಣ ವರ್ಷದ ಸಂಭ್ರಮದಲ್ಲಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ಮೇಲ್ಘಟಕದ ನಿರ್ದೇಶನಕ್ಕಾಗಿ ಸೇವೆ ಮಾಡದೆ ನಿಜವಾದ ಅರ್ಥದಲ್ಲಿ ಅರ್ಹರನ್ನು ಹುಡುಕಿ ಸೇವೆ ಮಾಡುತ್ತಿದೆ ಎಂದು ಲಯನ್ಸ್ ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ ಹೇಳಿದರು.


ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ಮಾಡಿದ ಅವರು ಸೇವಾ ಚಟುವಟಿಕೆಗಳನ್ನು ಮೆಚ್ಚಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ವಹಿಸಿದ್ದು, ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವವನ್ನು ವಿಶೇಷ ರೀತಿಯಲ್ಲಿ ಸಂಘಟಿಸಲಾಗುವುದು. ಶಾಶ್ವತ ಯೋಜನೆ ಕೂಡ ಮಾಡಲಾಗುವುದು ಎಂದರು.


ವೇದಿಕೆಯಲ್ಲಿ ಪ್ರಾಂತ್ಯದ ವಿವಿಧ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳು, ವಲಯಾಧ್ಯಕ್ಷ ದಿನೇಶ್ ಎಂ.ಕೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.
ಶಿಲ್ಪಾ ರಾವ್ ಪ್ರಾರ್ಥನೆ ಹಾಡಿದರು. ವಸಂತ ಶೆಟ್ಟಿ ವೇದಿಕೆಗೆ ಆಹ್ವಾನಿಸಿದರು. ದತ್ತಾತ್ರೇಯ ಗೊಲ್ಲ ಧ್ವಜವಂದನೆ ನಡೆಸಿದರು. ನೀತಿ‌ಸಂಹಿತಿಯನ್ನು ಪ್ರಭಾಕರ ಗೌಡ ಬೊಳ್ಮ ವಾಚಿಸಿದರು.ಘಟಕದ ವರದಿಯನ್ನು ಕಾರ್ಯದರ್ಶಿ ಅನಂತಕೃಷ್ಣ ವಾಚಿಸಿ ಪ್ರಾಂತ್ಯಾಧ್ಯಕ್ಷ ರಿಗೆ ಹಸ್ತಾಂತರಿಸಿದರು. ಸೇವಾ ಚಟುವಟಿಕೆಗಳ ವಿವರವನ್ನು ಸುರೇಶ್ ಶೆಟ್ಟಿ, ಧರಣೇಂದ್ರ ಕೆ ಜೈನ್ ಮಂಡಿಸಿದರು. ಪ್ರಾಂತ್ಯಾಧ್ಯಕ್ಷರ ಪರಿಚಯವನ್ನು ಕೃಷ್ಣ ಆಚಾರ್ ನಡೆಸಿದರು.

ಸಮಾರಂಭದಕ್ಕೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.‌ಮೆಲ್ವಿನ್ ಡಿಸೋಜಾ,‌ ಕಾರ್ಯದರ್ಶಿ ಓಸ್ವಾಲ್ಡ್ ಅಚ್ಚರಿಯ ಭೇಟಿ ನೀಡಿ ಶುಭ ಕೋರಿದರು. ಕೋಶಾಧಿಕಾರಿ ಸುಭಾಶಿಣಿ ಧನ್ಯವಾದ ಸಮರ್ಪಿಸಿದರು. ದಿನದ ಸೇವಾ ಚಟುವಟಿಕೆಯಂಗವಾಗಿ ಅರ್ಹ ಕುಟುಂಬಗಳಿಗೆ ಅಕ್ಕಿ‌ ವಿತರಿಸಲಾಯಿತು. ವಿದ್ಯಾರ್ಥಿನಿಯೊಬ್ಬರಿಗೆ ಶೈಕ್ಷಣಿಕ ನಿಧಿ ಹಸ್ತಾಂತರಿಸಲಾಯಿತು.
.‌

Leave a Comment

error: Content is protected !!