ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತೆಕ್ಕಾರು: ಬಾಜಾರು ಓಂ ರಾಮ್ ಫ್ರೆಂಡ್ಸ್ ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

ತೆಕ್ಕಾರು: ಓಂ ರಾಮ್ ಫ್ರೆಂಡ್ಸ್ ಬಾಜಾರು ಆಶ್ರಯದಲ್ಲಿ ಶ್ರೀ ರಾಮ ದುರ್ಗಾ ಪರಮೇಶ್ವರಿ ಭಜನಾ ಮಂದಿರ ಬಾಜಾರು ಇವರ ಸಹಕಾರದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ 60ಕೆಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ ತೆಕ್ಕಾರು ಮರಮಗುತ್ತು ದಿವಂಗತ ಮರಮ ಲಿಂಗಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಊರಿನ ಹಿರಿಯರಾದ ತುಕಾರಾಮ ನಾಯಕ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗ್ರಾಮದ ಹಾಗೂ ನೆರೆಯ ಗ್ರಾಮದವರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಂ ರಾಮ್ ಫ್ರೆಂಡ್ಸ್ ನ ಅಧ್ಯಕ್ಷ ಪ್ರಕಾಶ್ ಕುಮಾರ್ ವಂದಾಯ ವಹಿಸಿದ್ದರು,
ಮುಖ್ಯ ಅಭ್ಯಾಗತರಾಗಿ ಅಜಿಲಮೊಗರು ಮಸೀದಿಯ ಅಲ್ ಹಾಜಿ ಅಬ್ದುಲ್ ಹಮೀದ್ ಮದನಿ ಮಾಜಿ ಖತೀಬರು‌. ರೆಹಾನತ್, ಗ್ರಾಮ ಪಂಚಾಯತ್ ಅಧ್ಯಕ್ಷರು ತೆಕ್ಕಾರು, ಜನಾರ್ಧನ ಪೂಜಾರಿ ಮರಮ, ಪ್ರಶಾಂತ್ ವಕೀಲರು ಬಾಜಾರ, ಮಂಜುನಾಥ್ ಸಾಲ್ಯಾನ್, ಅಬ್ದುಲ್ ರಝಾಕ್, ಲಕ್ಷ್ಮಣ್ ಬಟ್ರೆಬೈಲು, ರಾಘವೇಂದ್ರ ಅಡಪ,ಸಂಪತ್ ಕುಮಾರ್ ಶೆಟ್ಟಿ ಶುಭಹಾರೈಸಿದರು, ಸಂಜೀವ ಪೂಜಾರಿ ನೇಲ್ಯಪಲ್ಕೆ, ಪ್ರಶಾಂತ್ ಮೈರ ‌, ತಿಮ್ಮಪ್ಪ ಪೂಜಾರಿ ಬಾಜಾರು, ಪುರುಷೋತ್ತಮ ಮಜಲು, ಸಾಂತಪ್ಪ ಹಟದಡ್ಕ, ಕೃಷ್ಣ ಐತಾಳ್, ಯಜ್ಞೆಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ಬೆಳಿಗ್ಗೆ ಭಜನೆ, ಮಹಿಳೆಯರಿಗೆ , ಪುರುಷರ, ಮಕ್ಕಳಿಗೆ ವಿವಿಧ ಕ್ರೀಡೆ ನಡೆಯಿತು.ದೇವಿ ಪ್ರಸಾದ್ ನಿರೂಪಿಸಿ, ತಿಲಕ್ ರಾಜ್ ವಂದಿಸಿದರು. ಮರುದಿನ ಬೆಳಿಗ್ಗೆ ತನಕ ಕಬಡಿ ಪಂದ್ಯಾಟ ರೋಚಕವಾಗಿ ಜರಗಿತು

Related posts

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಮೇ 3 -12: ಕಾಜೂರು ಉರೂಸ್ ಮಹಾಸಂಭ್ರಮ: ಮೇ 12 ರಂದು ಸರ್ವಧರ್ಮೀಯರ ಸೌಹಾರ್ದ ಸಂಗಮ- ಉರೂಸ್ ಸಮಾರೋಪ

Suddi Udaya

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Suddi Udaya

ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ ಬಂದಾರಿನ ಚಂದ್ರಹಾಸ ಕುಂಬಾರ ಆಯ್ಕೆ

Suddi Udaya

ಪೆರ್ಲ ಬೈಪಾಡಿ ಸ. ಹಿ. ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಕೆ.ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಮುಂಡಾಜೆ : ದಿ. ಮಹಾಬಲ ರೈ ಕಲ್ಲಹಿತ್ತಿಲು ಅವರ ಸ್ಮರಣಾರ್ಥ ಬಸ್ಸು ತಂಗುದಾಣ ಲೋಕಾರ್ಪಣೆ

Suddi Udaya
error: Content is protected !!