April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಅಕ್ರಮ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ : ರೂ. 54 ಸಾವಿರ ನಗದು ಸಹಿತ 37 ಮಂದಿ ವಶ

ಮಡಂತ್ಯಾರು: ಅ.14 ರಂದು ರಾತ್ರಿ ಮಾಲಾಡಿ ಗ್ರಾಮದ, ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದಲ್ಲಿರುವ ಎಂ.ಆರ್‌ ರೀಕ್ರಿಯೇಷನ್‌ ಕ್ಲಬ್‌ ನ ಹಿಂಬಾಗದಲ್ಲಿ, ತಗಡು ಶೀಟ್‌ ಛಾವಣಿಯ ಶೆಡ್‌ ನ ಒಳಗೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್‌-ಬಹಾರ್‌ ) ಎಂಬ ಅದೃಷ್ಟದ ಆಟವನ್ನು ಆಡುತ್ತಿದ್ದಾಗ, ಪುಂಜಾಲಕಟ್ಟೆ ಪೊಲೀಸ್‌ ಉಪ ನಿರೀಕ್ಷಕರು ಹಾಗು ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ನಡೆಸಿದರು.

ಈ ವೇಳೆ ಒಬ್ಬ ವ್ಯಕ್ತಿಯು ಪರಾರಿಯಾಗಿದ್ದು, ಉಳಿದ 37 ಮಂದಿ ಆರೋಪಿಗಳನ್ನು ಮತ್ತು ಸ್ಥಳದಲ್ಲಿ ಇದ್ದ ಆಟಕ್ಕೆ ಉಪಯೋಗಿಸಿದ ಇಸ್ಪಿಟ್ ಎಲೆಗಳು, ನಗದು ರೂ 54,510/- , ಉಪಯೋಗಿಸಿದ ಪಿಠೋಪಕರಣಗಳು, 4 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ನ್ಯಾಯಾಲಯದ ಅನುಮತಿ ಪಡೆದು ಅ. 16 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ: 91/2023 ಕಲಂ: ಕಲಂ: 79, 80 ಕರ್ನಾಟಕ ಪೊಲೀಸ್‌ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಹರಿಯಾಣದಲ್ಲಿ ನಡೆಯುವ ಗೋಲ್ಡನ್ ಆರೋ ರ್‍ಯಾಲಿಗೆ ಬೆಳ್ತಂಗಡಿಯ ಸೇವಂತಿ, ದ್ವಿಶಾ ಆಯ್ಕೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ಕಕ್ಕಿಂಜೆ: ಬೀಟಿಗೆ ಹಯಾತುಲ್ ಇಸ್ಲಾಂ ಮದರಸದ ವಾರ್ಷಿಕ ಮಹಾಸಭೆ: ಸಮಿತಿ ರಚನೆ

Suddi Udaya

ಕಲ್ಲೇರಿಯ ಪವರ್ ಮ್ಯಾನ್ ಸಂದೀಪ್ ಎಂ ರವರು ಮಂಗಳೂರಿನ ಮಲ್ಲಿಕಟ್ಟೆ ಕಾರ್ಯ ಮತ್ತು ಪಾಲನಾ ಶಾಖೆಗೆ ಪದೋನ್ನತಿ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಂಡಾಜೆ ಇದರ ಆಶ್ರಯದಲ್ಲಿ70ನೇ ವರ್ಷದ ಅಖಿಲ ಭಾರತ ಸಹಕಾರ ಸಪ್ತಾಹ- ಸಮಾರೋಪ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ವಿಶೇಷ ಕಾಯ೯ಕಾರಿಣಿ ಸಭೆ

Suddi Udaya
error: Content is protected !!