ಬಳಂಜ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ .ಟ್ರಸ್ಟ್ ಬಳಂಜ ವಲಯ ಬಳಂಜ ಕಾರ್ಯಕ್ಷೇತ್ರದ ಸಿ.ಎಸ್.ಸಿ ಕೇಂದ್ರವು ಇದುವರೆಗೆ ಬಳೆOಜ ವಿಶ್ವ ದೀಪ ಜ್ಯುವೆಲರಿ ಪಕ್ಕದಲ್ಲಿದ್ದು ಪ್ರಸ್ತುತ ಅ.16ರಂದು ಶ್ರೀ ಪದ್ಮಾಂಬಿಕ ಸಂಕೀರ್ಣಕ್ಕೆ ಸ್ಲಳOತರಗೊಂಡಿದ್ದು ಇದರ ಮಾಲಕರಾದ ವಿಜಯ್ ಕುಮಾರ್ ಜೈನ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ. ತಾಲೂಕು ಸಮನ್ವಯಧಿಕಾರಿ ಶ್ರೀಮತಿ ಹರಿಣಿ, ಬಳಂಜ ವಲಯದ ಮೇಲ್ವಿಚಾರಕರಾದ. ಗಣೇಶ್ ಭಟ್, ಎಬಿ ಒಕ್ಕೂಟದ ಸೇವಾ ಪ್ರತಿನಿಧಿಯಾದ ಶ್ರೀಮತಿ ಯುಷ್ಮ ಮತ್ತು ಶ್ರೀಮತಿ ಪ್ರಮೀಳ. ಎ. ಒಕ್ಕೂಟದ ಅಧ್ಯಕ್ಷರಾದ ಡೀಕಯ್ಯ ಕೆ, ಪದಾಧಿಕಾರಿಗಳಾದ ಜಗತ್ ಪಾಲ್ ಕಡಂಬ, ಅಬೂಬಕರ್, ನಿತ್ಯಾನಂದ ಹೆಗಡೆ, ಗೋಪಾಲ್ ಹೆಗಡೆ, ರಮೇಶ್ ಆಚಾರ್ಯ, ಧರ್ಮಪ್ಪ ದೇವಾಡಿಗ ಮತ್ತು ಸುವಿದ ಸಹಾಯಕಿಯಾದ ಕು. ಶೋಭಾ ರವರು ಉಪಸ್ಥಿತರಿದ್ದರು











