38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಸಾಮರಸ್ಯ ಸಾರಿದ ಮಂಗಳೂರು ದಸರಾ ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಹರ್ಷ

ಒಂದೇ ಜಾತಿ ಒಂದೇ ಮತ ಒಂದೇ ದೇವರು ಮಾನವರಿಗೆ ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹಾಪುರುಷರು ಸಿದ್ಧಾಂತ ಇಂದಿನ ಸಮಾಜಕ್ಕೆ ಅಗತ್ಯ. ನಾವೆಲ್ಲರೂ ದೇವರ ಮಕ್ಕಳು. ಕುದ್ರೋಳಿ ಕ್ಷೇತ್ರದಲ್ಲಿ ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ಉತ್ಸವ ಮಾದರಿ ಎಂದು ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ‌ಲಾರೆನ್ಸ್ ಮುಕುಝಿ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಅ. 16ರಂದು ಪಾಲ್ಗೊಂಡು ದೇವರ ದರುಶನ ಪಡೆದು‌ ಕ್ಷೇತ್ರದ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು.

ಕುದ್ರೋಳಿ ಕ್ಷೇತ್ರದ ಪರವಾಗಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. , ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸದಸ್ಯರಾದ ರಾಧಾಕೃಷ್ಣ, ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಚೇರ್ಮನ್ ಸೂರ್ಯಕಾಂತ್ ಜೆ. ಸುವರ್ಣ ಆತ್ಮೀಯವಾಗಿ ಸ್ವಾಗತಿಸಿದರು.

ಕಂಕನಾಡಿ ಆಲ್ಫೋನ್ಸ್ ಚರ್ಚ್ ಧರ್ಮಗುರು ಫಾ.ಮಾಣಿ, ಬೆಳ್ತಂಗಡಿ ಧರ್ಮಪ್ರಾಂತ್ಯ ಪಿಆರ್‌ಓ ಸೆಬಾಸ್ಟಿಯನ್ ಕೆ.ವಿ ಜತೆಗಿದ್ದರು.

Related posts

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ನೂತನ ಕಚೇರಿ ಉದ್ಘಾಟನೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಬಜಿರೆ: ಹೊಸಪಟ್ಣ ನಿವಾಸಿ ಸಂಜೀವ ಹೆಗ್ಡೆ ನಿಧನ

Suddi Udaya

ತೆಂಕಕಾರಂದೂರು: ಕಟ್ಟೆಯ ಸಾರ್ವಜನಿಕ ಬಸ್ಸು ತಂಗುದಾಣ ಕುಸಿತ

Suddi Udaya

ಬೆಳಾಲು ಶ್ರೀ ಧ.ಮಂ.ಅ.ಪ್ರೌ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ: ಸಾಯಿ ಕುಮಾರ್ ಶೆಟ್ಟಿ ನವಶಕ್ತಿ ಇವರಿಂದ ಕಾಯಾ೯ಲಯದ ಉದ್ಘಾಟನೆ

Suddi Udaya

ಮಲವಂತಿಗೆ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆ ಬೆಂಕಿಗಾಹುತಿ: ಅಪಾರ ನಷ್ಟ

Suddi Udaya
error: Content is protected !!