March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ವೇಣೂರು: ಮಹಾಮಸ್ತಕಾಭಿಷೇಕ ಮಹೋತ್ಸವದ ನೋಡೆಲ್ ಅಧಿಕಾರಿಯಾಗಿ ಮಾಣಿಕ್ಯ ಹಾಗೂ ಸಮನ್ವಯ ಅಧಿಕಾರಿಯಾಗಿ ಕೆ. ಜಯಕೀರ್ತಿ ಜೈನ್ ನೇಮಕ

ಬೆಳ್ತಂಗಡಿ: 2024 ಫೆಬ್ರವರಿಯಲ್ಲಿ ವೇಣೂರಿನಲ್ಲಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಕ್ರಮಗಳ ಸುಸುತ್ರ ನಿರ್ವಹಣೆಗಾಗಿ ನೋಡೆಲ್ ಹಾಗೂ ಸಮನ್ವಯ ಅಧಿಕಾರಿಗಳನ್ನು ನೇಮಕಗೊಳಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.


ದ.ಕ ಮಂಗಳೂರಿನ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮಾಣಿಕ್ಯ ಅವರನ್ನು ನೋಡೆಲ್ ಅಧಿಕಾರಿಯಾಗಿ ಹಾಗೂ ಪಶುಸಂಗೋಪನಾ ಇಲಾಖೆಯಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಕೆ. ಜಯಕೀರ್ತಿ ಜೈನ್ ಅವರು ಸಮನ್ವಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.


ಅ.5ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವ -2024 ಆಚರಣೆಯ ಸಮಾಲೋಚನಾ ಸಭೆಯಲ್ಲಿ ಆದ ನಿರ್ಣಯದಂತೆ ದ.ಕ ಜಿಲ್ಲಾಧಿಕಾರಿಗಳು ಇಬ್ಬರು ಅಧಿಕಾರಿಗಳನ್ನು ನೇಮಕಗೊಳಿಸಿ ಈ ಆದೇಶ ಮಾಡಿದ್ದಾರೆ.

Related posts

ಕುಂಭಶ್ರೀ ಆಂ.ಮಾ. ಶಾಲೆಯ ಸಂಸ್ಥಾಪಕ ಗಿರೀಶ್ ಕೆ ಎಚ್ ರವರಿಂದ ಉಚಿತ ಪುಸ್ತಕ ವಿತರಣೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರ

Suddi Udaya

ಬೈಲಹೊಂಗಲ ಮಂಡಲದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ‘ಶೌರ್ಯ’ ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸಭೆ

Suddi Udaya

ಜಾರಿಗೆ ಬೈಲು: ಅಕ್ರಮ ಗೋ ಸಾಗಟ :ರಾಷ್ಟ್ರೀಯ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರಿಂದ ಕಾರ್ಯಾಚರಣೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರ ಪತ್ತೆಯಾಗಿ ಪೊಲೀಸರ ಮನವಿ

Suddi Udaya
error: Content is protected !!