22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ‘ಶೌರ್ಯ’ ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸಭೆ

ಉಜಿರೆ: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತುರ್ತು ಸ್ಪಂದನಾ ತಂಡದ ಸಭೆಯು ಉಜಿರೆಯ ಶಾರದಾ ಮಂಟಪದಲ್ಲಿ ಇಂದು ನಡೆಯಿತು.

ಬೆಳ್ತಂಗಡಿ ತಾಲೂಕಿನಲ್ಲಿ ತುರ್ತು ಸಂದರ್ಭದಲ್ಲಿ ವಿಪತ್ತುಗಳ ನಿರ್ವಹಣೆಗೆಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ತುರ್ತು ಸ್ಪಂದನಾ ತಂಡವನ್ನು ರಚಿಸಲಾಗಿದ್ದು ಯಾವುದೇ ರೀತಿಯ ವಿಪತ್ತುಗಳು ಇದ್ದರೂಸಹಾಯಕ್ಕೆ ಧಾವಿಸುವ ಕೌಶಲ್ಯ ಯುತ ಸದಸ್ಯರನ್ನು ಈ ವಿಪತ್ತು ನಿರ್ವಹಣಾ ತುರ್ತು ಸ್ಪಂದನಾ ತಂಡ ಒಳಗೊಂಡಿದೆ.

ತುರ್ತು ಸ್ಪಂದನಾ ತಂಡದಿಂದ ವರ್ಷದಲ್ಲಿ ಎರಡು ಬಾರಿ ಸಭೆ ನಡೆಸಿ ಚಟುವಟಿಕೆಗಳ ಪರಾಮರ್ಶೆ ಮಾಡಲಾಗುತ್ತದೆ.ಕಳೆದ ಆರು ತಿಂಗಳಲ್ಲಿ ತುರ್ತು ಸ್ಪಂದನಾ ತಂಡದ ಮೂಲಕ 48 ವಿಪತ್ತು ನಿರ್ವಹಣಾ ಸೇವೆಗಳನ್ನು ಹಾಗೂ 6 ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಗಿದೆ.

ಪೊಲೀಸ್ ಇಲಾಖೆಯ ಮನವಿಯ ಮೇರೆಗೆ ಅನಾಥ ಶವ ತೆರವು, ಮುಳುಗಿದ ವ್ಯಕ್ತಿಯ ಪ್ರಾಣ ರಕ್ಷಣೆ, ರಸ್ತೆ ಅಪಘಾತದಲ್ಲಿ ಗಾಯಗೊಂಡ ವರನ್ನು ಆಸ್ಪತ್ರೆಗೆ ದಾಖಲಿಸುವುದು, ಹಾವು ಕಡಿತದಿಂದ ಅಪಾಯದಲ್ಲಿ ಇರುವ ವ್ಯಕ್ತಿ ಗೆ ಚಿಕಿತ್ಸೆ ಕೊಡಿಸಿರುವುದು ಹೀಗೆ ಅನೇಕ ಆಕಸ್ಮಿಕ ಅವಘಡ ಸಂದರ್ಭದಲ್ಲಿ ಈ ತಂಡವು ಮಾನವೀಯತೆ ಮೆರೆದಿದೆ. ಕಳೆದ ಎರಡು ವರ್ಷದಲ್ಲಿ ಈ ತಂಡವು 150 ಕ್ಕೂ ಹೆಚ್ಚು ಸೇವೆಗಳನ್ನು ಸಲ್ಲಿಸಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್ ಎಸ್ ರವರ ಪ್ರೇರಣೆ ಯಿಂದ ಈ ಘಟಕದ ಸದಸ್ಯರು ಚಟುವಟಿಕೆ ಯಲ್ಲಿ ಸಕ್ರಿಯವಾಗಿ ದ್ದು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯ್ಸ್ ರವರು ಮಾರ್ಗದರ್ಶನ ನೀಡುತ್ತಿದ್ದಾರೆ.

ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ, ಕಿಶೋರ್ ಕುಮಾರ್, ಮೇಲ್ವಿಚಾರಕರಾದ ರವೀಂದ್ರ, ಪೂರ್ಣಿಮಾ, ಸಂಯೋಜಕರಾದ ಪ್ರಮೀಳಾ, ಸೇವಾಪ್ರತಿನಿಧಿ ಪ್ರೇಮಲತಾ, ಸಮಿತಿಯ ಮಾಸ್ಟರ್ ಅವಿನಾಶ್ ಬಿಡೆ, ಕ್ಯಾಪ್ಟನ್ ರವೀಂದ್ರ, ಸಂಯೋಜಕರಾದ ಸುಲೈಮಾನ್ ಉಪಸ್ಥಿತರಿದ್ದರು.ತುರ್ತು ಸ್ಪಂದನಾ ತಂಡದ 21 ಸ್ವಯಂಸೇವಕರು ಸಭೆಯಲ್ಲಿ ಭಾಗವಹಿಸಿದ್ದರು.

Related posts

ಎ.20: ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: 10 ಸಾವಿರ ಕಾರ್ಯಕರ್ತರು ಭಾಗಿ

Suddi Udaya

ಬೆಳ್ತಂಗಡಿ ಡಿ.ಕೆ.ಆರ್. ಡಿ.ಎಸ್ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಕಣ್ತಪ್ಪಿನಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ: ಮರುಪಾವತಿಸಲು ನಿರಾಕರಣೆ ; ದೂರು ದಾಖಲು

Suddi Udaya

ಧರ್ಮಸ್ಥಳ-ನಾರಾವಿ ನಡುವಿನ ಸರಕಾರಿ ಬಸ್ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಇಂದು ಸಂಜೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಬೃಹತ್ ಪ್ರತಿಭಟನೆ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ದೀಪಾವಳಿ ಸಂಭ್ರಮ

Suddi Udaya

ಮೇ 19: ಅಯೋಧ್ಯೆಯಲ್ಲಿ ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ: 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಶಾಖಾ ಮಠದ ಭೂಮಿ ಪೂಜೆ

Suddi Udaya
error: Content is protected !!