April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ತಾಳೆ ಬೆಳೆ ಪ್ರದೇಶ ವಿಸ್ತರಣೆ: ಅರ್ಜಿ ಆಹ್ವಾನ

ಬೆಳ್ತಂಗಡಿ: ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ (ತಾಳೆ ಎಣ್ಣೆ) ಯೋಜನೆಯಡಿ 2023 -24ನೇ ಸಾಲಿನಲ್ಲಿ ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳುವ ರೈತರಿಗೆ ಪ್ರೋತ್ಸಾಹಧನ ಲಭ್ಯವಿದೆ. ಆಸಕ್ತ ರೈತರು ತಮ್ಮ ಜಮೀನಿನ ಪಹಣಿ (RTC) ಮತ್ತು ಆಧಾರ್ ಪ್ರತಿ ಹಾಗೂ ಅರ್ಜಿಯೊಂದಿಗೆ ನ.30 ರೊಳಗೆ ತೋಟಗಾರಿಕೆ ಇಲಾಖೆ (ಜಿ ಪಂ) ಬೆಳ್ತಂಗಡಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

ತಾಳೆಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಅನುಮೋದಿತ ಕಂಪನಿಗಳಿಂದ ಗಿಡಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ, ಗಿಡಗಳ ನಿರ್ವಹಣೆಗೆ ಮೂರು ವರ್ಷಗಳ ನಿರ್ವಹಣ ವೆಚ್ಛ ಫಸಲನ್ನು ಖರೀದಿಸಲು ಕಂಪನಿಯವರಿಂದ ಅನುಕೂಲವೂ ಇದೆ. ತಾಳೆ ಬೆಳೆ ಬೆಂಬಲ ಬೆಲೆಯೂ ದೊರೆಯಲಿದೆ. ಹನಿ ನೀರಾವರಿ ಯಾಂತ್ರಿಕರಣ ಸಹಾಯಧನ ಸೌಲಭ್ಯವಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿ ಹೋಬಳಿ ಮಹಾವೀರ ಶೇಬಣ್ಣವರ 8123921087, ವೇಣೂರು ಹೋಬಳಿ ಭೀಮರಾಯ ಸೊಡ್ಡಗಿ ಮೊಬೈಲ್ ನಂ: 9741713598, ಕೊಕ್ಕಡ ಹೋಬಳಿ ಮಲ್ಲಿನಾಥ ಬಿರಾದಾರ, ಮೊಬೈಲ್ ನಂ: 9986411477, ಸಹಾಯಕ ತೋಟಗಾರಿಕೆ ನಿರ್ದೇಶಕರು ಕೆ.ಎಸ್‌. ಚಂದ್ರಶೇಖರ್, ಮೊಬೈಲ್ ನಂ: 9448336863 ಸಂಪರ್ಕಿಸಬಹುದು.

Related posts

ಉಜಿರೆ: ರುಡ್ ಸೆಟ್ ಸಮೀಪ ರಸ್ತೆಗೆ ಬಿದ್ದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರುಗೊಳಿಸಲು ಸಚಿವ ಸಂಪುಟ ಅನುಮೋದನೆ

Suddi Udaya

ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿ.ಎಂ ನಿರ್ಧಾರ

Suddi Udaya

ನಾರಾವಿ: ಶ್ರೀ ಕ್ಷೇತ್ರ ಧ. ಗ್ರಾ. ಯೋ. ಬಿಸಿ ಟ್ರಸ್ಟ್ ನಿಂದ ಚಿತ್ತಾರ ಕೇಂದ್ರಿಕೃತ ಭತ್ತ ನರ್ಸರಿಗೆ ಚಾಲನೆ

Suddi Udaya

ಉಜಿರೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಧರ್ಮಸ್ಥಳ: ಪುನಶ್ಚೇತನಾ ಕಾರ್ಯಾಗಾರದ ಸಮಾರೋಪ ಸಮಾರಂಭ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಮಾರ್ಗದರ್ಶನ

Suddi Udaya
error: Content is protected !!