ನಾವೂರು: ನಾವೂರು 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.20ರಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಅಶ್ವಿನ್ ಭಟ್ ರವರ ಪೌರೋಹಿತ್ಯದಲ್ಲಿ ನಡೆಯಿತು.
ಬೆಳಿಗ್ಗೆ ನಾವೂರು ಸಿ.ಎ ಬ್ಯಾಂಕ್ ಬಳಿಯಿಂದ ಭವ್ಯವಾದ ಶಾರದಾ ಮೂರ್ತಿಯ ಮೆರವಣಿಗೆ ,ಗಣಹೋಮ, ಶಾರದಾ ಮೂರ್ತಿ ಪ್ರತಿಷ್ಠೆ, ಭಜನಾ ಕಾರ್ಯಕ್ರಮ , ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕಾರಿಂಜ ಅಧ್ಯಕ್ಷತೆ ವಹಿಸಿದರು. ಕಾರ್ಕಳ ಅಕ್ಷಯ ಗೋಖಲೆ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ, ನಾವೂರು ಆರೋಗ್ಯ ಕ್ಲಿನಿಕ್ ಡಾ| ಪ್ರದೀಪ್ ಎ , ನಾವೂರು ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಸುನಂದ ಭಾಗವಹಿಸಿದರು.
ಸುಮಾರು 25 ವರ್ಷಗಳ ಕಾಲ ದುಡಿದ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಮೋದ್ ಸಾಲ್ಯಾನ್ , ಕೋಶಾಧಿಕಾರಿ ಲಕ್ಷ್ಮೀಶ ಕೆ, ಜೊತೆಕಾರ್ಯದರ್ಶಿ ವಿನ್ಯಾಶ್ ಇಡ್ಯಾಲ, ಕಾರ್ಯದರ್ಶಿ ಬಾಲಕೃಷ್ಣ , ಸದಸ್ಯರು , ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಅಧ್ಯಕ್ಷ ಹರೀಶ್ ಕಾರಿಂಜ ಸ್ವಾಗತಿಸಿದರು. ಗಣೇಶ್ ಗೌಡ ನೆಲ್ಲಿಪಲ್ಕೆ ಧನ್ಯವಾದವಿತ್ತರು. ಸುರೇಶ್ ಗೋಳಿದಡಿ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಕಾರ್ನಿಕದ ಗತ ವೈಭವ (ಮಾಯೋಡ್ ಮೆರೆಯಿನ ಸತ್ಯೊಲ್ನ ಕತೆ) ನಾಟಕ ನಡೆಯಲಿದೆ. ಹಾಗೂ ಊರ ಪರವೂರ ವಿವಿಧ ಭಜನಾ ಮಂಡಳಿಗಳಿಂದ ಭಜನೆ , ವಿವಿಧ ವೇಷ ಭೂಷಣಗಳು, ಹುಲಿ ಕುಣಿತ, ವಿದ್ಯುದ್ದೀಪಲಂಕೃತವಾದ ಸ್ಥಬ್ಧ ಚಿತ್ರ ವಾಹನಗಳೊಂದಿಗೆ ಶಾರದಾ ಮೂರ್ತಿಯ ವೈಭವದ ಶೋಭಾಯಾತ್ರೆ ಕೈಕಂಬ ಹೊಳೆಯಲ್ಲಿ ವಿಗ್ರಹ ಜಲಸ್ತಂಭನ ನಡೆಯಲಿದೆ.