September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೆ.28: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂಡಿಕಾಯಾಗ-ಸತ್ಯದರ್ಶನ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಳೆದ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಷಡ್ಯಂತ್ರದ ಪೊರೆ ಕಳಚುತ್ತಿದ್ದು, ಇಡೀ ದೇಶಕ್ಕೆ ಸತ್ಯದ ಅನಾವರಣ ಆಗುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪಾವಿತ್ರತೆ ಹಾಗೂ ಪೂಜ್ಯ ಹೆಗ್ಗಡೆಯವರ ನಿಷ್ಕಲ್ಮಷ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಹಿಂದಿನಿಂದಲೂ ಒಪ್ಪಿಕೊಂಡು ಬಂದ ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತಾದಿಗಳು ಒಟ್ಟಾಗಿ ದೈವ-ದೇವರುಗಳಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸುವ ಮತ್ತು ಸತ್ಯ, ನ್ಯಾಯದ ಜೊತೆಗೆ ನಾವು ಎಂದಿಗೂ ಇರುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಸೆ.28ರಂದು ಶ್ರೀ ಕ್ಷೇತ್ರದಲ್ಲಿ ಒಂದಾಗಿ ಪವಿತ್ರವಾದ ಚಂಡಿಕಾ ಯಾಗ ಮತ್ತು ಸತ್ಯ ದರ್ಶನ ಸಮಾವೇಶವನ್ನು ಹಮ್ಮಿಕೊಂಡಿರುತ್ತೇವೆ ಎಂದು ಶ್ರೀ ಚಂಡಿಕಾಯಾಗ ಮತ್ತು ಸತ್ಯದರ್ಶನ ಸಮಾವೇಶ ಸಂಚಾಲನಾ ಸಮಿತಿಯ ಸಂಚಾಲಕರುಗಳಾದ ಉದ್ಯಮಿ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ, ಬೆಳ್ತಂಗಡಿ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಚಂಡಿಕಾಯಾಗಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ವತಿಯಿಂದ ಸಮರ್ಪಿಸಲ್ಪಡುವ ಫಲ-ಪುಷ್ಪಗಳ ಸಮರ್ಪಣೆಯ ಮೆರವಣಿಗೆ ಪೂರ್ವಾಹ್ನ 9-45ಕ್ಕೆ ಶ್ರೀ ಕ್ಷೇತ್ರದ ಮಹಾದ್ವಾರದಿಂದ ಪ್ರಾರಂಭಗೊಂಡು, ಯಾಗ ಮಂಟಪವುಳ್ಳ ಅಮೃತವರ್ಷಿಣಿ ಸಭಾಂಗಣದವರೆಗೆ ನಡೆಯಲಿದೆ. 10-30ಕ್ಕೆ ಸರಿಯಾಗಿ ಧರ್ಮಾಧಿಕಾರಿಗಳ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿಯು ವೇದ ವಿದ್ವಜ್ಜನರ ಮೂಲಕ ನಡೆಯಲಿದೆ. ಪೂರ್ವಾಹ್ನ 11-00 ಗಂಟೆಗೆ ಸರಿಯಾಗಿ ‘ಸತ್ಯದರ್ಶನ’ ಸಮಾವೇಶ ನಡೆಯಲಿದ್ದು, ಹೆಗ್ಗಡೆಯವರು ತಾಲೂಕಿನ ಜನತೆಗೆ ಆಶೀರ್ವಚನಪೂರಕವಾದ ಸಂದೇಶವನ್ನು ನೀಡಲಿದ್ದಾರೆ.

Related posts

ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸೂಚನೆ: ಇ-ಕೆವೈಸಿ ಮಾಡಲು ಡಿ.31 ಕೊನೆಯ ದಿನ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಮತದಾನ ಜಾಗೃತಿ ಕಾರ್ಯಾಗಾರ

Suddi Udaya

ಬಂದಾರು: 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ವುಮೆನ್ ಇಂಡಿಯಾ ಮೂವ್ಮೆಂಟ್, ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ಬಂಜೆತನ ತಪಾಸಣಾ ಶಿಬಿರ

Suddi Udaya

ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಸಮಿತಿ ಕನ್ವಿನರ್ ಆಗಿ ನ್ಯಾಯವಾದಿ ಅಸ್ಮಾ ಬೆಳ್ತಂಗಡಿ ಆಯ್ಕೆ

Suddi Udaya
error: Content is protected !!