ಬೆಳ್ತಂಗಡಿ: 2033 -24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಹಾಗೂ ಇತರ ತೋಟಗಾರಿಕೆ ಉತ್ಪನ್ನಗಳನ್ನು ಒಣಗಿಸಲು ಖರೀದಿಸಿರುವ ವಿವಿಧ ಅಳತೆಯ HDPE UV ಶೀಟ್ / ಸೋಲಾರ್ ಟಾರ್ಪಾಲಿನ್ ಗಳಿ ಗೆ ಒಟ್ಟು ವೆಚ್ಚದ ಶೇ 40 ರಂತೆ ಪ್ರತಿ ಚ.ಮೀ. ಗೆ ರೂ. 20.00 ರಂತೆ ಸಹಾಯಧನ ಲಭ್ಯವಿರುತ್ತದೆ. HDPE UV ಶೀಟ್/ಸೋಲಾರ್ ಟಾರ್ಪಾಲಿನ್ ಗಳನ್ನು 01/04/2023 ರ ನಂತರ ಖರೀದಿಸಿರುವ ರೈತರು ಶೀಟ್ ಖರೀದಿಸಿರುವ ಬಗೆ, GST ನಂಬರ್ ಇರುವ ಮೂಲ ಬಿಲ್ಲು, ಪಹಣಿ, ಆಧಾರ್ ನ ಪ್ರತಿ ಚಾಲ್ತಿ ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಹಾಗೂ ಸೋಲಾರ್ ಶೀಟ್ ಅನ್ನು Solar Dier ಗೆ ಅಳವಡಿಸಿಕೊಂಡಿರುವ ಛಾಯಾಚಿತ್ರ ಪ್ರತಿಯೊಂದಿಗೆ ಸಂಬಂಧಿಸಿದ ತಾಲೂಕು ತೋಟಗಾರಿಕೆ ಇಲಾಖಾ ಕಛೇರಿಯಲ್ಲಿ ನ. 30 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿ ಹೋಬಳಿ ಮಹಾವೀರ ಶೇಬಣ್ಣವರ 8123921087, ವೇಣೂರು ಹೋಬಳಿ ಭೀಮರಾಯ ಸೊಡ್ಡಗಿ ಮೊಬೈಲ್ ನಂ: 9741713598, ಕೊಕ್ಕಡ ಹೋಬಳಿ ಮಲ್ಲಿನಾಥ ಬಿರಾದಾರ, ಮೊಬೈಲ್ ನಂ: 9986411477, ಸಹಾಯಕ ತೋಟಗಾರಿಕೆ ನಿರ್ದೇಶಕರು ಕೆ.ಎಸ್. ಚಂದ್ರಶೇಖರ್, ಮೊಬೈಲ್ ನಂ: 9448336863 ಸಂಪರ್ಕಿಸಬಹುದು.