September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಆಟೋ ಚಾಲಕರ ಸಂಘದ ವತಿಯಿಂದ ಶಿವರಾಮ ಪೂಜಾರಿ ರವರಿಗೆ ಧನಸಹಾಯ

ಬೆಳ್ತಂಗಡಿ : ಕಳಿಯ ಗ್ರಾಮದ ಬೆಳ್ತಂಗಡಿ ಹೂವಿನ ವ್ಯಾಪಾರಿ ಮೇರ್ಲ ಶಿವರಾಮ ಪೂಜಾರಿ ಇತ್ತೀಚಿಗೆ ಅಪಘಾತದಲ್ಲಿ ಗಾಯಗೊಂಡ ಅವರ ಆರೋಗ್ಯ ಚಿಕಿತ್ಸೆಗಾಗಿ ಗೇರುಕಟ್ಟೆ ಸ್ನೇಹ ಸಂಗಮ ಅಟೋ ಚಾಲಕ-ಮಾಲಕರ ಸಂಘದ ವತಿಯಿಂದ ಮನೆಗೆ ಭೇಟಿ ನೀಡಿ ನಗದು ಧನ ಸಹಾಯ ನೀಡಿದರು ಹಾಗೂ ಬೇಗನೆ ಗುಣಮುಖರಾಗಿ ಎಂದು ಸಂಘದ ಸದಸ್ಯರು ಹಾರೈಸಿ ಮಾನವೀಯತೆ ಮೆರೆದರು.


ಮೇ.5 ರಂದು ರಾತ್ರಿ ಮನೆಗೆ ಬರುವಾಗ ಗುರುವಾಯನಕೆರೆ ವಾಹನ ಅಪಘಾತದಲ್ಲಿ ಗಂಭೀರವಾದ ಗಾಯಗೊಂಡರು.
ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಆಗಿದೆ. ಈಗಾಗಲೇ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಗೇರುಕಟ್ಟೆ ಚಾಲಕ-ಮಾಲಕರ ಸಂಘ ಸ್ಥಳೀಯ ಹಲವಾರು ಸಂಘ, ಸಂಸ್ಥೆಗಳ ಜೊತೆಯಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸಿ ಕೊಂಡು ಬರುತ್ತಿದ್ದಾರೆ.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಕಲಾಯಿತೊಟ್ಟು, ಪ್ರಧಾನ ಕಾರ್ಯದರ್ಶಿ ಸಿದ್ಧೀಕ್ ಜಿ.ಹೆಚ್, ಸುಣ್ಣಲಡ್ಡ, ಜೊತೆ ಕಾರ್ಯದರ್ಶಿ ಲೋಕಿತ್, ಸಂಘದ ಸದಸ್ಯರಾದ ಗೋಪಾಲ್ ನಾಯ್ಕ್ ಬನ, ವಸಂತ ಶೆಟ್ಟಿ ಮಾವಿನಕಟ್ಟೆ, ರಮೇಶ ಪೂಜಾರಿ ವಂಜಾರೆ, ಶೇಕುಂಞಿ ಸುಣ್ಣಲಡ್ಡ, ಅಬುಬಕ್ಕರ್ ಪದಗೋಳಿ, ಸಂದೀಪ್ ಪೂಜಾರಿ ಪಂಚಮಾಲಕೋಡಿ, ರತ್ನಾಕರ ಪೂಜಾರಿ ಬಳ್ಳಿದಡ್ಡ, ತಾರಾನಾಥ ಪೂಜಾರಿ ಬಳ್ಳಿದಡ್ಡ, ರಕ್ಷಿತ್ ಗೇರುಕಟ್ಟೆ, ಕೀರ್ತಿ ಗೇರುಕಟ್ಟೆ ಉಪಸ್ಥಿತರಿದ್ದರು.

Related posts

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಂಪೋರಿಯಲ್ಲಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಳ್ತಂಗಡಿ ಸ್ಥಳೀಯ ಸಂಸ್ಥೆ

Suddi Udaya

ನಾಳ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆ: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ರವರಿಗೆ ಚಿನ್ನದ ಪದಕ

Suddi Udaya

ತಂದೆ -ತಾಯಿ ಕಳೆದುಕೊಂಡ ಬಾಲಕಿಯ ಶಿಕ್ಷಣ ಮತ್ತು ಪುನರ್ವಸತಿಗೆ ವ್ಯವಸ್ಥೆ ಮಾಡಿದ ನಿಡ್ಲೆ ಗ್ರಾಮ ಪಂಚಾಯತ್

Suddi Udaya

ಮೇ 26: ಮಳೆಗಾಲದ – ಪ್ರಾಕೃತಿಕ ವಿಕೋಪಗಳ ಬಗ್ಗೆ ಪೂರ್ವ ತಯಾರಿ, ನಿರ್ವಹಣೆ ಹಾಗೂ ತುರ್ತು ಪರಿಹಾರಗಳ ಬಗ್ಗೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ ಜೊತೆ ಸಮಾಲೋಚನಾ ಸಭೆ

Suddi Udaya

ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆಗೆಯುವಂತೆ ಸ್ಥಳೀಯರ ಒತ್ತಾಯ

Suddi Udaya
error: Content is protected !!